ಬಂಟ್ವಾಳ, ಆ. 13 ಬಿಸಿರೋಡಿನಲ್ಲಿರುವ ಪೆಟ್ರೋಲ್ ಬಂಕ್ ಯೊಂದರ ಮ್ಯಾನೇಜರ್ ಹೃದಯಘಾತದಿಂದ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಿಸಿರೋಡಿನ ಪೆಲತ್ತಿಮಾರ್ ನಿವಾಸಿ ಸಂಜೀವ ಅವರ ಪುತ್ರ ಪುರುಷೋತ್ತಮ ಪೂಜಾರಿ (45) ಮೃತಪಟ್ಟ ವ್ಯಕ್ತಿ.
ಶನಿವಾರ ಮಧ್ಯ ರಾತ್ರಿ ಇವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.