ತಿರುವನಂತಪುರ, ಆ. 16 : ತಾಯಿ ಹಾಲು ಕುಡಿದು ಮಲಗಿದ್ದ 3 ತಿಂಗಳ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಎದೆ ಹಾಲು ಮಗುವಿನ ಶ್ವಾಸನಾಳಕ್ಕೆ ಸೇರಿ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಪಳ್ಳಿಚಲ್ ಮೂಲದ ಜಯಕೃಷ್ಣನ್ ಮತ್ತು ಜಾನಿಮೋಲ್ ದಂಪತಿಯ ಏಕೈಕ ಪುತ್ರ ಜಿತೇಶ್ ಮೃತ ಮಗುವಾಗಿದೆ.
ಭಾನುವಾರ ರಾತ್ರಿ ಮಗುವಿಗೆ ಹಾಲುಣಿಸಿ ಮಲಗಿಸಿದ್ದರು. ಆದರೆ ಸೋಮವಾರ ಬೆಳಗ್ಗೆಯಾದರೂ ಮಗು ಎದ್ದಿಲ್ಲ ಇದನ್ನು ಕಂಡು ಪೋಷಕರು ಸೋಮವಾರ ಬೆಳಗ್ಗೆ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬಳಿಕ ವೈದ್ಯರು ಪರೀಕ್ಷೆ ನಡೆಸಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಅಂತೆಯೇ ಪೋಷಕರು ಎಸ್ಐಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.