ಸ್ಯಾನ್ ಡಿಯಾಗೋ, ಆ. 26 ; ಅಮೆರಿಕದ ನೌಕಾಪಡೆಯ ಮೆರೈನ್ ಕಾರ್ಪ್ಸ್ ಎಫ್/ಎ-18 ಹಾರ್ನೆಟ್ ಫೈಟರ್ ಜೆಟ್ ಪತನಗೊಂಡು ಒಬ್ಬ ಪೈಲೆಟ್ ಸಾವನ್ನಪ್ಪಿದ ಘಟನೆ ಸ್ಯಾನ್ ಡಿಯಾಗೋ ದಲ್ಲಿ ನಡೆದಿದೆ.
ಅಪಘಾತದ ಸ್ಥಳವು ಮೆರೆನ್ ಕಾರ್ಪ್ ಏರ್ ಸ್ಟೇಷನ್ ಮಿರಾಮರ್ ಬಳಿ ಇದೆ. ಗುರುವಾರ ಮಧ್ಯರಾತ್ರಿ ಫೈಟರ್ ಜೆಟ್
ಪತನಗೊಂಡಿದೆ.ಅಪಘಾತದ ನಂತರ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ತಂಡ ಖಚಿತಪಡಿಸಿದೆ. ಫೈಟರ್ ಜೆಟ್ ಪತನದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.