ಜೈಪುರ, ಸೆ 02 : ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಒಂದೇ ಕುಟುಂಬದ 4 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಹಿಟ್ಟಿನ ಗಿರಣಿ ಅರ್ಜುನ ಸಿಂಗ್ ಎಂಬವರಿಗೆ ಸೇರಿದ್ದು, ಘಟನೆ ನಡೆದ ಸಮಯದಲ್ಲಿ ಅರ್ಜುನ ಸಿಂಗ್ ಅವರು ಕೆಲಸದ ನಿಮಿತ್ತ ದೆಹಲಿಯಲ್ಲಿದ್ದರು. ಅವರ ಪತ್ನಿ ಹಿಟ್ಟಿನ ಗಿರಣಿ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ.
ತಾಯಿಯನ್ನು ರಕ್ಷಿಸಲು ಇಬ್ಬರು ಪುತ್ರರು ಧಾವಿಸಿದ್ದು, ಅವರಿಗೂ ವಿದ್ಯುತ್ ತಗುಲಿದೆ. ಅರ್ಜುನವರ ಮಾವ ಮೂವರನ್ನು ವಿದ್ಯುತ್ ಶಾಕ್ ನಲ್ಲಿ ನೋಡಿದಾಗ ಅವರನ್ನು ರಕ್ಷಣೆ ಮಾಡಲು ಹೋಗಿದ್ದು, ಅವರು ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.