ಮಂಗಳೂರು, ಸೆ. 16 : ಓಂ ಸಾಯಿ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣವಾದ ನಿಗೂಢ ಗುರುತು’ ಕನ್ನಡ ಚಲನಚಿತ್ರ ಸೆ. 15 ರಂದು ಭಾರತ್ ಸಿನೆಮಾಸ್ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದೆ.
ಉದ್ಯವರ ಮಾಡ ಶ್ರೀ ಅರಸು ಮಂಜೀಷ್ಕಾರ್ ದೈವಸ್ಥಾನದ ದೈವದ ಪಾತ್ರಿ ಶ್ರೀ ತಿಮಿರಿ ಬೆಲ್ಚಪ್ಪಾಡರವರು ಇತರ ಗಣ್ಯರೊಂದಿಗೆ ಸೇರಿ ದೀಪ ಬೆಳಗಿಸಿದರು.ನಂತರ ಚಿತ್ರಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ರಂಗ ಕಲಾವಿದೆ ರೂಪಾಶ್ರೀ ವರ್ಕಾಡಿ,ಕಾಂತಾರ ಚಿತದಲ್ಲಿ ನಟಿಸಿದ ನವೀನ್ ಬೊಂದೇಲ್, ಚಿತ್ರದ ನಿರ್ಮಾಪಕಿ ಪ್ರಿಯಾ ಚಿದಾನಂದ್ ಪೆರ್ಲ, ಸಹನಿರ್ಮಾಪಕರಾದ ಚಿದಾನಂದ್ ಪೆರ್ಲ, ವಿಶಾಲ ಕರ್ನಾಟಕದ ಹಂಚಿಕೆದಾರ ತುಕಾರಾಮ ಬಾಯಾರು, ಪಿ.ಆರ್.ಓ ರತನ್ ಕುಮಾರ್ ಹೊಸಂಗಡಿ ಮತ್ತಿತ್ತರು ಉಪಸ್ಥಿತರಿದ್ದರು.
ಅರ್ಜುನ್,ರಕ್ಷಿತ್,ರಂಜಿತ್,ಸಂತೋಷ್ ಕುಮಾರ್.ವಸಂತ್.ವಸಂತ್ ಲ್ಯಾನ್ಸಿ ಶೋಭ ನಾಯರ್. ಸುಧಾಕರ್.ರಘುನಂದನ್,ಹೇಮಂತ್,ಪ್ರಶಾಂತ್ ಕೆ.ಪಿ..ಕಾಮಾಕ್ಷೀ.ಚೈತ್ರ ಸೇರಿದಂತೆ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸಸ್ಪೆನ್ಸ್ ಕಥೆಯನ್ನೊಳಗೊಂಡಿದೆ.