ನವದೆಹಲಿ, ಅ. 12 :ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರುಳುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭಾರತವು ಆಪರೇಶನ್ ಅಜಯ್ ಕಾರ್ಯಾಚರಣೆಗೆ ಚಾಲನೆ ನೀಡಿದೆ ಎಂದು ವಿದೇಶಾಂಗ ಸಚಿವರಾದ ಎಸ್. ಜೈ ಶಂಕರ್ ಬುಧವಾರ ಘೋಷಿಸಿದ್ದಾರೆ.
ಮೊದಲ ವಿಮಾನದಲ್ಲಿ ಸ್ವದೇಶಕ್ಕೆ ಮರಳಲು ಬಯಸುವವರ ವಿವರವನ್ನು ಇಸ್ರೇಲ್ ನಲ್ಲಿ ರುವ ರಾಯಭಾರ ಕಚೇರಿಯು ಸಂಗ್ರಹಿಸಿದ್ದು,ಅವರಿಗೆ ಈಗಾಗಲೇ ವಿಮಾನದ ವಿವರಗಳನ್ನು ನೀಡಲಾಗಿದೆ.
ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯಲ್ಲಿ ನೊಂದಾಯಿಸಿರುವ ಪ್ರಥಮ ಬ್ಯಾಚ್ ನ ನಾಗರಿಕರನ್ನು ಗುರುವಾರದಂದು ಸ್ವದೇಶಕ್ಕೆ ಕರೆತರಲಾಗುವುದು. ಇದೇ ರೀತಿಯ ಇತರೆ ನೋಂದಾಯಿತ ನಾಗರಿಕರನ್ನು ನಂತರದ ವಿಮಾನಗಳಲ್ಲಿ ಕರೆತರಲಾಗುವುದು ಎಂದು ಮಿಷನ್ ತಿಳಿಸಿದೆ.