ಉಡುಪಿ, ನ. 08 :ಟೆಂಪೂ ಮತ್ತು ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಅಲೆವೂರು ಮಣಿಪಾಲ ರಸ್ತೆಯ ವಿಠ್ಠಲ ಸಭಾಭವನದ ಬಳಿ ನಡೆದಿದೆ.ಮೃತರನ್ನು ಮಹಮದ್ ತನ್ಸಿಲ್ ( 28) ಎಂದು ಗುರುತಿಸಲಾಗಿದೆ.
ಅಲೆವೂರು ಕಡೆಯಿಂದ ಮಂಚಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ಗೆ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ತನ್ಸಿಲ್ ಸ್ಥಳದಲ್ಲಿಯೇ ಮೃತಪಟ್ಟರೆಂದು ಎಂದು ವರದಿಯಾಗಿದೆ.
ಮಣಿಪಾಲ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.