ಉಡುಪಿ, ನ. 18: ಕಟ್ಟಿಗೆ ಕಡಿಯುತ್ತಿದ್ದ ವೇಳೆ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಮೃತರನ್ನು ಮಣಿಪಾಲ ನಿವಾಸಿ ಮುರುಗೇಶ್ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ಮುರುಗೇಶ್ ಅವರು ಮನೆಯ ಹತ್ತಿರದ ಕಾಡಿಯಲ್ಲಿ ಮರವನ್ನು ಹತ್ತಿ ಒಣ ಕಟ್ಟಿಗೆಯನ್ನು ಕಡಿಯುತ್ತಿದ್ದರು. ಈ ವೇಳೆ ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.