ತೆಲಂಗಾಣ, ಡಿ 05 : ಭಾರತೀಯ ವಾಯುಪಡೆಯ ಲಘು ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ತೂಪ್ರಾನ್ ಬಳಿಯ ರಾವೆಲ್ಲಿಎಂಬಲ್ಲಿ ಸೋಮವಾರ ನಡೆದಿದೆ.
ವಿಮಾನ ಪತನಗೊಂಡಾಗ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಸಂಪೂರ್ಣ ಸುಟ್ಟು ಬೂದಿಯಾಗಿದೆ. ವಿಮಾನ ಪತನಕ್ಕೆ ತಾಂತ್ರಿಕ ವೈಫಲ್ಯ ಕಾರಣ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಈ ವಿಮಾನ ವಾಯುಪಡೆಯ ತರಬೇತಿ ವಿಮಾನವಾಗಿದ್ದು, ಅದರಲ್ಲಿದ್ದ ಓರ್ವ ಪೈಲಟ್ ಬೋಧಕನಾಗಿದ್ದು ಇನ್ನೋರ್ವ ತರಬೇತಿ ಪಡೆಯುತ್ತಿದ್ದ ಕೆಡೆಟ್ ಆಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.