ಕಾಸರಗೋಡು, ಜ. 06 : ಯುವತಿಯೋರ್ವಳು ರೈಲಿ ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಪಳ್ಳಿಕೆರೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನುಕಲ್ಪಟ್ಟ ಕಾವುಮಂದದ ಐಶ್ವರ್ಯ ಜೋಸೆಫ್ (30) ಎಂದು ಗುರುತಿಸಲಾಗಿದೆ.
ಪಳ್ಳಿಕೆರೆ ಮಾಸ್ತಿ ಗುಡ್ಡೆ ಯ ರೈಲ್ವೆ ಹಳಿ ಸಮೀಪ ಮೃತ ದೇಹಪತ್ತೆ ಯಾಗಿದೆ. ರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕೋಜಿಕ್ಕೊಡ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಉದ್ಯೋಗ ದ ನಿಮಿತ್ತ ನೇತ್ರಾವತಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.