ಫ್ರಾನ್ಸ್, ಫೆ 04 : ಜಗತ್ತಿನ ಗಮನ ಸೆಳೆದಿರುವ ಭಾರತದ ಯುಪಿಐ ತಂತ್ರಜ್ಞಾನ ಇದೀಗ ಫ್ರಾನ್ಸ್ಗೆ ಕಾಲಿಟ್ಟಿದೆ. ಇಮಾನ್ಯುಯೆಲ್ ಮ್ಯಾಕ್ರಾನ್ ರವರು ಭಾರತದಿಂದ ವಾಪಸ್ ಹೋದ ಬೆನ್ನಲ್ಲೇ ಫ್ರಾನ್ಸ್ನಲ್ಲಿ ಭಾರತದ ಯುಪಿಐ ಪಾವತಿ ಶುರುವಾಗಿದ್ದು, ಫೆ 2 ರಂದು ಪ್ಯಾರೀಸ್ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯುಪಿಐ ಪಾವತಿಗೆ ಚಾಲನೆ ದೊರೆತಿದೆ.
ಭಾರತದ ಪ್ರವಾಸಿಗರು ಇನ್ನು ಯುಪಿಐ ಬಳಸಿ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಖರೀದಿಸಬಹುದು ಹಾಗೂ ಐಫೆಲ್ ಟವರ್ಗೆ ಭೇಟಿ ನೀಡಲು ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ಎನ್ ಪಿಸಿಐ ತಿಳಿಸಿದೆ.
ಭಾರತದ ಯುಪಿಐ ತಂತ್ರಜ್ಞಾನದ ಕುರಿತು ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಯುಪಿಐ ಪಾವತಿಯನ್ನು ಜಾಗತಿಕಗೊಳಿಸುವ ದೃಷ್ಟಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ಬರೆದುಕೊಂಡಿದೆ.