ಮಂಗಳೂರು, ಫೆ. 12 : ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ತಣ್ಣೀರುಬಾವಿ ಬೀಚ್ನಲ್ಲಿ 2 ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಚಾಲನೆ ನೀಡಿದರು.
ನಂತರ ಮಾತಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರತೀ ವರ್ಷ ನಿಗದಿತ ದಿನಾಂಕಗಳನ್ನುಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೋಧಿಸಿದರು.
ಇಂಡೋನೇಷಿಯಾ, ಎಸ್ಟೋನಿಯಾ, ಥೈಲ್ಯಾಂಡ್, ಉಕ್ರೇನ್, ವಿಯೆಟ್ನಾಂ, ಮಲೇಷ್ಯಾ, ಗ್ರೀಸ್ ಮತ್ತು ಸ್ವೀಡನ್ ಅಂತರಾಷ್ಟ್ರೀಯ ಹಾರಾಟಗಾರರು, ಗುಜರಾತ್, ಮಹಾರಾಷ್ಟ್ರ,ಕೇರಳ ಮತ್ತು ತೆಲಂಗಾಣದಿಂದ 22 ಕ್ಕೂ ಹೆಚ್ಚು ಭಾರತೀಯ ಗಾಳಿಪಟ ಹಾರಾಟಗಾರರು ಭಾಗವಹಿಸಿದ್ದರು.