ಮಂಗಳೂರು, ಫೆ. 16 : ಉರ್ವ ಬೋಳೂರುನಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಾರಿಯಮ್ಮದೇವಿಗೆ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ನೆರವೇರಿತು.
ಪ್ರಾತಃಕಾಲ 2ರಿಂದಲೇ ಸಹಸ್ರಕಲಶ ಸಹಿತ ಬ್ರಹ್ಮಕಲಶ ಪೂರಣ, ಗೋಪೂಜೆ, 5.15ರಿಂದ ಪಂಚಗವ್ಯ, ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ಜರಗಿತು. ಬೆಳಗ್ಗೆ 8.12ಕ್ಕೆ ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕುಂಭಾಭಿಷೇಕ, ವಿಶೇಷ ಮಂತ್ರನ್ಯಾಸ, ಪರಿವಾರ ದೇವರುಗಳಿಗೆ ಕಲಶಾ ಭಿಷೇಕ, ವಿಶೇಷ ಸಾನ್ನಿಧ್ಯ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ| ಜಿ. ಶಂಕರ್, ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಬೊಕ್ಕಪಟ್ಟ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರ.ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ್ ಅಮೀನ್ ಬೈಕಂಪಾಡಿ, ಜತೆ ಕೋಶಾಧಿಕಾರಿ ಶಶಿಧರ್ ಕೋಡಿಕಲ್, ಜತೆ ಕಾರ್ಯದರ್ಶಿ ಮೋಹನ್ ದಲಾಲ್, ವಾಸುದೇವ ಸಾಲ್ಯಾನ್ ಕೂಳೂರು, ಆಡಳಿತ ಮೊಕ್ತಸರ ಲಕ್ಷ್ಮಣ್ ಅಮೀನ್ ಕೋಡಿಕಲ್, ಪ್ರಮುಖರಾದ ಪುರುಷೋತ್ತಮ ಕೋಟ್ಯಾನ್, ಯಶವಂತ್ ಪಿ. ಮೆಂಡನ್ ಬೋಳೂರು, ರಂಜನ್ ಕಾಂಚನ್ ಬೋಳೂರು, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಸುರೇಶ್ ಕುಂದರ್ ಕೂಳೂರು, ಅಮರನಾಥ ಸುವರ್ಣ, ರಾಜೀವ ಕಾಂಚನ್, ಮಂಗಳೂರು ಏಳುಪಟ್ಟಮೊಗವೀರ ಸಂಯುಕ್ತ ಮಹಾಸಭಾ ಅಧ್ಯಕ್ಷಲೋಕೇಶ್ ಸುವರ್ಣ ಮೊದಲಾದವರು ಭಾಗವಹಿಸಿದ್ದರು.