ಬೆಳ್ತಂಗಡಿ, ಮಾ. 11: ಹಿರಿಯ ಸಾಹಿತಿ, ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ, ಪತ್ರಕರ್ತ ಪ್ರೊ.ನಾ ವುಜಿರೆ (87) ಸೋಮವಾರ ಅನಾರೋಗ್ಯದಿಂದ ನಿಧನ ಹೊಂದಿದರು.
ನಾ.ವುಜಿರೆ ಎಂದೇ ಜನಪ್ರಿಯರಾಗಿದ್ದ ಅವರು, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಅವರ ಪತ್ನಿ ಸರಸ್ವತಿ ಎನ್. ರಾಜ್ ಮತ್ತು ಒಬ್ಬ ಮಗ ಪಾರ್ಶ್ವನಾಥ್ ಸೇರಿ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.