ತೈಪೆ, ಏ 04 : ತೈವಾನ್ ನಲ್ಲಿ ಏ. 03, ರಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.5 ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ.
ಭೂಕಂಪದಿಂದಾಗಿ ದಕ್ಷಿಣ ಜಪಾನ್ ಹಾಗೂ ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ. ತೈವಾನ್ ನ ಹುವಾಲಿಯನ್ ನಗರದಿಂದ ದಕ್ಷಿಣಕ್ಕೆ 18 ಕಿ.ಮೀ, 34.8 ಕಿ.ಮೀ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದುಯಿದೆ ಎಂದು ತಿಳಿದುಬಂದಿದೆ.
ಭೂಕಂಪದಿಂದಾಗಿ ನಗರದ ಹಲವೆಡೆ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಜೊತೆಗೆ ನಗರದಲ್ಲಿನ ಕೆಲವು ಕಟ್ಟಡಗಳು ಕುಸಿದಿವೆ ಎನ್ನಲಾಗಿದೆ.