ಕುಂದಾಪುರ, ಏ. 12 : ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ಆಟವಾಡಲು ಹೋಗಿದ್ದ 10 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.11ರಂದು ಶಂಕರನಾರಾಯಣ ದಲ್ಲಿ ನಡೆದಿದೆ.
ಮೃತರನ್ನು ಮುಹಮ್ಮದ್ ಅರೀಝ್ (10) ಎಂದು ಗುರುತಿಸಲಾಗಿದೆ.
ಗುರುವಾರ ಮನೆ ಮಂದಿಯೊಂದಿಗೆ ಹೆಂಗವಳ್ಳಿ ಯ ಖಾಸಗಿ ರೆಸಾರ್ಟ್ನ ಈಜುಕೊಳದಲ್ಲಿ ನೀರಿಗೆ ಬಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.