ಸುರತ್ಕಲ್ , ಏ. 16: ದ.ಕ.ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರು ಸುರತ್ಕಲ್, ಮುಕ್ಕಾ, ಕೃಷ್ಣಾಪುರ, ಚಿತ್ರಾಪುರ, ಕಾಟಿಪಳ್ಳ, ಚೊಕ್ಕಬೆಟ್ಟು, ಪಣಂಬೂರು, ಕೂಳೂರು, ಕಾವೂರು, ಕುಂಜತ್ತಬೈಲ್ ಮೊದಲಾದ ಪ್ರದೇಶಗಳಲ್ಲಿ ಸೋಮವಾರ ರೋಡ್ ಶೋ ಮೂಲಕ ಮತಯಾಚಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ನಡೆದ ರೋಡ್ ಶೋನಲ್ಲಿ ಅಭ್ಯರ್ಥಿ ತೆರೆದ ವಾಹನದಲ್ಲಿ ಸಾಗಿದರು. ಕೆಲ ಪ್ರದೇಶಗಳಲ್ಲಿ ತೆರೆದ ವಾಹನದಿಂದ ಇಳಿದು, ನೇರವಾಗಿ ಮತದಾರರ ಬಳಿಗೆ ತೆರಳಿ ಮತಯಾಚಿಸಿದರು.
ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಅಲಿ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿರಾಜ್ ಸುವರ್ಣ, ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಚಿತ್ರಾಪುರ ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರದಲ್ಲಿ ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ ಪಿ.,ಪ್ರತಿಭಾ ಕುಳಾಯಿ, ಪುರುಷೋತ್ತಮ ದೇವಾಡಿಗ, ಪಿ.ಜಿ. ಕುಂದರ್, ಯಾದವ ಶೆಟ್ಟಿ, ದೇವೇಂದ್ರ, ಕೇಶವ ಕಾಂಚನ, ಅಮರನಾಥ ಗುರಿಕ್ಕಾರ, ಪುರುಷೋತ್ತಮ ಕೋಟ್ಯಾನ್, ನಾಗೇಶ್ ಪುತ್ರನ್, ರಮೇಶ್ ಪುತ್ರನ್ ಹಾಗೂ ಮುಕ್ಕ ಜುಮ್ಮಾ ಮಸೀದಿಯ ರಝಾಕ್, ಎಂ.ಸಿ. ಉಮ್ಮರ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.