ಉರ್ವ, ಏ.22 : ಉರ್ವ ಬೋಳೂರು ಶ್ರೀ ಕೊರಗಜ್ಜನ ಕ್ಷೇತ್ರ ದಲ್ಲಿ 18ನೇ ವಾರ್ಷಿಕ ನೇಮೋತ್ಸವವು ತಾ. 20-04-2024de ಶನಿವಾರದಿಂದ 21-04-2024 ರವಿವಾರದ ತನಕ ವಿಜ್ರಂಭಣೆಯಿಂದ ಜರಗಿತು.
ಈ ಪ್ರಯುಕ್ತ ತಾ. 21-04-2024 ಆದಿತ್ಯವಾರ ರಾತ್ರಿ 7.00 ಗಂಟೆಗೆ ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ದೊಂದಿ ಬೆಳಕಿನ (ತುಡರ ಕೋಲ) ಸೇವೆ ನಂತರ ಅಗೇಲು ಸೇವೆ, ಗಂಧ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.