ಮೂಡುಬಿದಿರೆ, ಏ.28 : ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಎರಡನೇ ಶಾಖೆಯು ಮೂಡುಬಿದಿರೆಯ ಜೈನಪೇಟೆ ಬಡಗು ಬಸದಿ ಎದುರಿನ ಫಾರ್ಚೂನ್ ಹೈವೇ-2 ಕಟ್ಟಡದ ಮೊದಲ ಮಹಡಿಯಲ್ಲಿ ಏ. 27, ಆದಿತ್ಯವಾರ ಉದ್ಘಾಟನೆಗೊಂಡಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆಯ ಕಚೇರಿಯನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು. ನಂತರ ವಲೇರಿಯನ್ ಮೊರಾಸ್ ಅವರಿಗೆ ಮೊದಲ ಪಾಲು ಬಂಡವಾಳ ಪ್ರಮಾಣಪತ್ರ ವಿತರಿಸಿದರು.
ಆಶೀರ್ವಚನವಿತ್ತ ಅಲಂಗಾರು ಹೋಲಿ ರೋಸರಿ ಚರ್ಚ್ನ ಧರ್ಮಗುರು ವಂ ವಾಲ್ಟರ್ ಡಿ’ಸೋಜಾ ಅವರು ದೇವರ ಅನುಗ್ರಹದಿಂದ ಆಡಳಿತದ ಪ್ರಾಮಾಣಿಕತೆ, ಆಸಕ್ತಿ, ಸಿಬಂದಿಗಳ ಸೌಜನ್ಯಪೂರ್ಣ ಸೇವೆಯಿಂದ ಸಹಕಾರ ಸಂಘವು ಪ್ರಗತಿ ಹೊಂದಲು ಸಾಧ್ಯವಾಗುವುದು ಎಂದು ಹೇಳಿದರು. ಬಳಿಕ ಲೂಯಿಸ್ ಡಿ’ಸಿಲ್ವ ಅವರಿಗೆ ಮೊದಲ ನಿರಖು ಠೇವಣಾತಿ ಪತ್ರ ವಿತರಿಸಿದರು.
ಫರ್ಚೂನ್ ಪ್ರಮೋಟರ್ಸ್ ಪಾಲುದಾರರಾದ ಅಬುಲಾಲ್ ಪುತ್ತಿಗೆ ಅವರು ಭದ್ರತಾ ಕೋಶ ಉದ್ಘಾಟಿಸಿ ಮೆಟಲ್ಲಾ ಅಲ್ಲೋನ್ಸ್ ಅವರಿಗೆ ಉಳಿತಾಯ ಖಾತೆ ಪುಸ್ತಕ ವಿತರಿಸಿದರು. ಮೂಡುಬಿದಿರೆ ಕಥೋಲಿಕ್ ಸಭಾ ಅಧ್ಯಕ್ಷ ಅವಿಲ್ ಡಿ’ಸೋಜಾ ಅವರು ಗಣಕಯಂತ್ರ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಲೇರಿಯನ್, ರೊಡ್ರಿಗಸ್ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮತಾಡಿದ ಅವರು13 ವರ್ಷಗಳ ಹಿಂದೆ ಪ್ರಾರಂಭವಾದ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘವು 3,224 ಸದಸ್ಯಬಲ,42.75 ಲಕ್ಷ ಪಾಲು ಬಂಡವಾಳ, 55 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 195 ಕೋಟಿ ಲಾಭ ಗಳಿಸಿದ್ದು, ಕಳೆದ ಸಾಲಿಗೆ ಶೇ.18 ಡಿವಿಡೆಂಡ್ ನೀಡಲಾಗಿದೆ ನೂತನವಾಗಿ ಪ್ರಾರಂಭಗೊಂಡಿರುವ ಶಾಖೆಗೆ ಗ್ರಾಹಕ ಬೆಂಬಲ ಬಯಸಿದರು.
ನಿರ್ದೇಶಕ ಮಂಡಳಿಯ ಸಿಲ್ವೆಸ್ಟರ್ ಮೋನಿ, ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿ’ಸೋಜಾ, ಗೀತಾ `ಫೆಲ್ಸಿಯಾನ ಡಿ’ಸೋಜಾ, ಫೆಲಿಕ್ಸ್ ಡಿ’ಸೋಜಾ, ಆಶಾ ಬೆನೆಡಿಕ್ಟ್ ಸಲ್ದಾನ, ವಲೇರಿಯನ್ ಗ್ರಾಸ್ತಾ, ಸಿಇಒ ವಿಲ್ಸನ್ ನೆಲ್ಸನ್, ನಿರ್ದೇಶಕಿ ಮೇಬಲ್ ಪ್ಲೇವಿಯಾ ಲೋಬೋ ಉಪಾಧ್ಯಕ್ಷರಾದ ಅನಿಲ್ ಪ್ರಕಾಶ್, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.