ಕಾಸರಗೋಡು, ಮೇ.1 : ಕಣ್ಣೂರು ಕಣ್ಣಾ ಪುರ ದಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಕಾಸರಗೋಡು ನಿವಾಸಿಗಳು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕಣ್ಣೂರು ಕಡೆಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕಾರು ಮತ್ತು ಕಣ್ಣೂರು ಕಡೆಗೆ ತೆರಳು ತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಸಾಗಾಟ ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಲ್ಲಿದ್ದ ಮೂವರು ಪುರುಷರು, ಓರ್ವ ಮಹಿಳೆ ಹಾಗೂ 10 ವರ್ಷದ ಬಾಲಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾರ ಲ್ಲಿದ್ದವರು ಚಿತ್ತಾರಿಕಾಲ್ ಬೀಮನಡಿ ನಿವಾಸಿಗಳು ಎಂದು ಹೇಳಲಾಗಿದೆ.