ಮಂಗಳೂರು,ಜೂ.2 : ಶ್ಯಾಮಲಾ ಎಜುಕೇಶನ್ ಟ್ರಸ್ಟ್ ನ ‘ಶಾಮ್ ಇನ್ ಸ್ಟಿಟ್ಯೂಟ್’ ಕಂಕನಾಡಿಯ ಮಂಗಳೂರು ಗೇಟ್ ಕಾಂಪ್ಲೆಕ್ಸ್ ಸಮೀಪದ ಕಟ್ಟಡದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸಂಸ್ಥೆ ಯನ್ನು ಉದ್ಘಾಟಿಸಿ ಮಾತಾಡಿ, ಶಾಮ್ ಇನ್ ಸ್ಟಿಟ್ಯೂಟ್ ಸಂಸ್ಥೆಯ ಮೂಲಕ ಕರಾವಳಿ ಜನತೆಗೆ ಉತ್ತಮ ಅವಕಾಶಗಳು, ಉದ್ಯೋಗ ಆಧಾರಿತ ಕೊರ್ಸ್ ಗಳು ಲಭ್ಯವಾಗಲಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಅಗತ್ಯವಿರುವ ಮೌಲ್ಯಗಳನ್ನು ಸಂಸ್ಥೆ ಕಲಿಸಲಿ ಎಂದು ಹೇಳಿದರು.
ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಮಾತನಾಡಿ, ಮಂಗಳೂರು ನಗರದಲ್ಲಿ ಉದ್ಯೋಗ ಮತ್ತು ಮಾರುಕಟ್ಟೆ ಸಂಬಂಧಿತವಾದ ಎಲ್ಲಾ ಕೋರ್ಸ್ಗಳು ಆರಂಭವಾಗಿರುವುದು ಖುಷಿಯ ವಿಚಾರ. ಮಂಗಳೂರಿಗೆ ಇಂತಹ ಇನ್ಸ್ಟಿಟ್ಯೂಟ್ನ ಅವಶ್ಯಕತೆ ಇದೆ ಎಂದರು.
ಶ್ಯಾಮಲಾ ಎಜ್ಯುಕೇಶ್ ಟ್ರಸ್ಟ್ನ ಚೇರ್‌ಮೆನ್ ಮತ್ತು ಮ್ಯಾನೇಜಿಂಗ್ ಡೆರೆಕ್ಟರ್ ಸಂದೇಶ್ ಸುವರ್ಣ ಅವರು ಮಾತನಾಡಿ, ಎಸೆಸೆಲ್ಸಿ, ಪಿಯುಸಿ ಮತ್ತು ಪದವಿ ಉತ್ತೀರ್ಣ ಮತ್ತು ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದೇವೆ. ಜೊತೆಗೆ ಸಿಇಟಿ, ನೀಟ್ ತರಬೇತಿಯನ್ನು ಕೂಡ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅನಿಲ್‌ದಾಸ್. ಮಂಗಳೂರು ಪಾಲಿಕೆ ಸದಸ್ಯರಾದ ಕಾವ್ಯ ನಟರಾಜ್ ಆಳ್ವಾ, ಸಂಸ್ಥೆಯ ಹಿರಿಯ ಶೈಕ್ಷಣಿಕ ವ್ಯವಸ್ಥಾಪಕ ನಿತೇಶ್, ಶ್ಯಾಮ್ ಶಿಕ್ಷಣ ಸಂಸ್ಥೆಯ ಎಚ್.ಆರ್. ಅನುಶ್ರೀ, ಶೈಕ್ಷಣಿಕ ಸಲಹೆಗಾರ ಅಣ್ಣಯ್ಯ ಶೆಟ್ಟಿ, ವ್ಯವಹಾರ ಅಭಿವೃದ್ಧಿ ಅಧಿಕಾರಿಗಳಾದ ಯತೀಶ್ ರಾವ್ ಉಪಸ್ಥಿತರಿದ್ದರು.