ಪುತ್ತೂರು,ಜೂ. 17 : ಕುಂಬ್ರದ ಶೇಖಮಲೆ ಎಂಬಲ್ಲಿ ಆಲ್ಟೋ ಕಾರು ಮತ್ತು ಬೊಲೆರೊ ನಡುವೆ ಡಿಕ್ಕಿ ಸಂಭವಿಸಿ, ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟ ಘಟನೆ ಕುಂಬ್ರದ ಶೇಖಮಲೆ ಎಂಬಲ್ಲಿ ನಡೆದಿದೆ.
ಮಡಿಕೇರಿ ಮೂಲದ ರವೀಂದ್ರ ಹಾಗೂ ಲೊಕೇಶ್ ಮೃತಪಟ್ಟವರು.
ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರು ಕುಂಬ್ರದ ಶೇಖಮಲೆ ಬಳಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿದ್ದ ಕಾರು ಪುತ್ತೂರು ಕಡೆ ಬರುತ್ತಿದ್ದ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದಿದೆ . ಪರಿಣಾಮ ಆಲ್ಟೋ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಗಾಯಗೊಂಡಿದ್ದಾರೆ ಎನ್ನಲಾಗಿದೆ.