ಮಂಗಳೂರು, ಜೂ. 20 : ಟೆಂಪೋ ಢಿಕ್ಕಿ ಹೊಡೆದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿ ಸಾವನಪ್ಪಿದ ಘಟನೆ ಮಂಗಳೂರಿನ ಕುಚಿಕಾಡು ಎಂಬಲ್ಲಿ ನಡೆದಿದೆ.
ಮೃತರನ್ನು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ರಾವ್ (65) ಎಂದು ಗುರುತಿಸಲಾಗಿದೆ.
ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್ ಅವರು ಸಂಜೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಚಿಕಾಡು ಎನ್ನುವಲ್ಲಿ ಟೆಂಪೋ ಢಿಕ್ಕಿ ಹೊಡೆದಿ ದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಸಾವನಪ್ಪಿದ್ದಾರೆ.