ಕಾಸರಗೋಡು, ಜೂ 25 : ಹಿಟಾಚಿ ಯಂತ್ರ ಮಗುಚಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಇಂದು ಬಂದಡ್ಕ ದಲ್ಲಿ ನಡೆದಿದೆ.ಬಂದಡ್ಕದ ಪ್ರೀತಂ ಲಾಲ್ ಚಂದ್ (22) ಮೃತಪಟ್ಟವರು.
ಬಂದಡ್ಕ ಪಡುಪ್ಪುನಲ್ಲಿರುವ ಸಂಬಂಧಿಕರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮನೆಯಂಗಳದಲ್ಲಿ ಹಿಟಾಚಿ ಯಂತ್ರವನ್ನು ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಮಗುಚಿ ಬಿದ್ದಿದ್ದು, ಅದರಡಿ ಸಿಲುಕಿದ್ದ ಲಾಲ್ ಚಂದ್ ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.