ಮಂಗಳೂರು, ಜೂ 28: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ನಗರದ ರೊಸಾರಿಯೋ ಬಳಿ ಬುಧವಾರ ನಡೆದಿದೆ.
ಮೃತ ರಿಕ್ಷಾ ಚಾಲಕರನ್ನು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ(46) ಹಾಗೂ ಸಕಲೇಶಪುರದ ಪಾಲ್ಯ ನಿವಾಸಿ ರಾಜು(50) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ ರಿಕ್ಷಾ ಚಾಲಕರಿಬ್ಬರೂ ಆಟೋ ತೊಳಿಯುತ್ತಿರುವ ಸಮಯದಲ್ಲಿ ವಿದ್ಯುತ್ ತಂತಿಯೊಂದು ಅವರ ಮೇಲೆ ಕಡಿದು ಬಿದ್ದಿದ್ದು,ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.