ಹಿರಿಯಡ್ಕ, ಜು 04 : ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಬಾಲಕನೊಬ್ಬ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜು.3ರಂದು ಅಂಜಾರು ಗ್ರಾಮದಲ್ಲಿ ನಡೆದಿದೆ.
ಅಂಜಾರು ಗ್ರಾಮದ ಪ್ರೇಮಾ ಎಂಬವರ ಮಗ ಪ್ರಜ್ವಲ್(17) ಮೃತಪಟ್ಟವರು.
ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜ್ವಲ್, ವಿಪರೀತ ಮದ್ಯಪಾನ ಮಾಡುತ್ತಿದ್ದನು. ಜು.೩ ರಂದು ಮದ್ಯರಾತ್ರಿ ಮೂತ್ರ ಮಾಡಲು ಬಾತ್‌ರೂಂಗೆ ಹೋದಾಗ ಅಸ್ವಸ್ಥನಾಗಿ ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ..
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.