ಬಜಾಲ್, ಜು. 14 : ಕಂಕನಾಡಿ ವಲಯ ಬಂಟರ ಸಂಘದ ಆಶ್ರಯದಲ್ಲಿ 15ನೇ ವಾರ್ಷಿಕ ಮಹಾಸಭೆ ಹಾಗೂ ಬಂಟ ಸಮ್ಮಿಲನ ಕಾರ್ಯಕ್ರಮವು ರವಿವಾರ ಜು. 14ರಂದು ಬಜಾಲ್ ಸಂತ ಜೋಸೆಫ್ ಹೈಸ್ಕೂಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನುಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಖಜಾಂಜಿ ಸಿಎ ರಾಮ್ ಮೋಹನ್ ರೈ ಅವರು ಇತರ ಗಣ್ಯರೊಂದಿಗೆ ಸೇರಿ ಉದ್ಘಾಟಿಸಿದರು.
ವಿಮರ್ಶಕ ತಮ್ಮಣ್ಣ ಶೆಟ್ಟಿ ಅವರು ದಿಕ್ಕೂಚಿ ಭಾಷಣವನ್ನುಮಾಡಿದರು. ಸಿಎ ರಾಮ್ ಮೋಹನ್ ರೈ, ಮ.ನ.ಪಾ. ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಅವರುಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಸಂಘದ ಅಧ್ಯಕ್ಷ ಬಿ. ನಾಗೇಶ್ ಶೆಟ್ಟಿ ಬಜಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ದಲ್ಲಿಸಾಧಕರ ಸಮ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಹಸಿರುದಳದ ಸಂಯೋಜಕ ನಾಗರಾಜ್ ಬಜಾಲ್ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದ್ದಲ್ಲಿ ಸಿಎ ರಾಮ್ ಮೋಹನ್ ರೈ, ಮಂಗಳೂರು ಇಂಟ ನ್ಯಾಶನಲ್ ಬಂಟ್ಸ್ ವೆಲ್ವೇರ್ ಟ್ರಸ್ಟಿನ ಸಂಘಟನ ಕಾರ್ಯದರ್ಶಿ ದೇವಿಚರಣ್ ಶೆಟ್ಟಿ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ವಿಮರ್ಶಕ ತಮ್ಮಣ್ಣ ಶೆಟ್ಟಿ ಪರಿಸರ ಪ್ರೇಮಿ, ಉದ್ಯಮಿ ಪ್ರವೀಣ್ ಚಂದ್ರ ರೈ, ಸಂಘದ ಅಧ್ಯಕ್ಷರು ಬಿ. ನಾಗೇಶ್ ಶೆಟ್ಟಿ , ರಾಮ್ ಚಂದ್ರ ಆಳ್ವ. ಕಮಲಾಕ್ಷ ಶೆಟ್ಟಿ ಮೊದಲಾದವರು ಉಪಸ್ಠಿತರಿದ್ದರು.