ಮಂಗಳೂರು, ಜು.19 : ಯೇನಪೊಯ ವೈದ್ಯಕೀಯ ಕಾಲೇಜಿನ ರಜತ ಮಹೋತ್ಸವ ಆಚರಣೆಯ ಭಾಗವಾಗಿ ಜು. 22, 23ರಂದು ಯೇನಪೊಯ ಕಾಲೇಜು ಕ್ಯಾಂಪಸ್‌ನಲ್ಲಿ ಮೆಗಾ ಯೋಗ ಮ್ಯಾರಥಾನ್ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ| ಎಂ.ಎಸ್. ಮೂಸಬ್ಬತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 22ರಂದು ಬೆಳಗ್ಗೆ 8.30ಕ್ಕೆ ಪ್ರಾಭವಾಗುವ ಕಾರ್ಯಕ್ರಮವನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ। ಇಪ್ಲಿಕಾರ್ ಅಲಿ ಉದ್ಘಾಟಿಸಲಿದ್ದಾರೆ. 25 ಗಂಟೆಗಳ ಯೋಗ ಪ್ರದರ್ಶನ ಜು. 23ರಂದು ಬೆಳಗ್ಗೆ 10 ಗಂಟೆಗೆ ಸಂಪನ್ನಗೊಳ್ಳಲಿದೆ. ಯೋಗ ತರಬೇತುದಾರ ಕುಶಾಲಪ್ಪ ಗೌಡ ತರಬೇತಿ ನೀಡಲಿದ್ದು, ಜಿಲ್ಲೆಯ ವಿವಿಧ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಪ್ರತಿ 1.30 ಗಂಟೆಯ ಅವಧಿಯ ಯೋಗ ತರಬೇತಿಯಲ್ಲಿ ಭಾಗವಹಿಲಿದ್ದಾರೆ. 25 ಗಂಟೆಯಲ್ಲಿಸುಮಾರು2,500ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಯೋಗ ತರಬೇತುದಾರ ಕುಶಾಲಪ್ಪಗೌಡ ಮಾತನಾಡಿ, ಯೋಗ ತರಬೇತಿ ಕಾರ್ಯಕ್ರಮಕ್ಕೆ ಇಂದೋರ್‌ನಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾರೋಪದಲ್ಲಿ ಆಯುಷ್ ಸಚಿವಾಲಯದ ಯೋಗದ ಹಿರಿಯ ಸಲಹೆಗಾರ ಡಾ| ಹಿಮಾನಿ ಶೋಖಂಡ್ ಭಾಗವಹಿಸಲಿದ್ದಾರೆ ಎಂದರು.
ಡಾ| ಅಶ್ವಿನಿ ಶೆಟ್ಟಿ ಮಾತನಾಡಿ, ಜು. 23ರಂದು ಸಂಜೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಜು. 27ರಂದು ರಜತ ಮಹೋತ್ಸವ ಆಚರಣೆಯ ಸಮಾರೋಪ ನಡೆಯಲಿದೆ. ಐಸಿಎಂಆರ್ ನ ಮಾಜಿ ಮಹಾನಿರ್ದೇಶಕರಾದ ಪ್ರೋ| ನಿರ್ಮಲ್ ಕುಮಾರ್ ಗಂಗೂಲಿ, ಡಾ| ವಿಶ್ವ ಮೋಹನ್ ಕಟೋಚ್ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ| ಎಂ.ಎಸ್. ಮೂಸಬ್ಬ,ಡಾ| ಅನಿಲ್ ಕೆ. ಕ್ಷಾಕುಂಜೆ, ಡಾ|ವಿ ಜಯೇಂದ್ರ ಉಪಸ್ಥಿತರಿದ್ದರು.