ಮಂಗಳೂರು, ಜು.20 :ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ. ಎ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಗುರುಪುರ ಸಮೀಪ ಕಲ್ಲಕಲಂಬಿ ಎಂಬಲ್ಲಿ ಜು.19 ರಂದು ನಡೆದಿದೆ. ಮೃತರನ್ನು ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ (21) ಎಂದು ಗುರುತಿಸಲಾಗಿದೆ.
ಮನೆಯ ದನ ಕಟ್ಟಲು ತಂದೆಯ ಜೊತೆ ಗದ್ದೆಗೆ ಹೋದಾಗ ಈ ಘಟನೆ ನಡೆದಿದೆ. ಜೊತೆಯಲ್ಲಿದ್ದ ಮನೆಯ ಸಾಕು ನಾಯಿಗೆ ಮೊದಲು ವಿದ್ಯುತ್ ಶಾಕ್ ತಗುಲಿತ್ತು. ನಾಯಿ ಶಾಕ್ನಿಂದ ಹೊರಳಾಡುವುದನ್ನು ಗಮನಿಸಿದ ನಾಯಿಯ ರಕ್ಷಣೆಗೆ ಆಶ್ನಿ ಮುಂದಾಗಿದ್ದು. ಈ ವೇಳೆ ತುಂಡಾಗಿ ಬಿದ್ದ ತಂತಿ ತುಳಿದು ಶಾಕ್ ಗೆ ಒಳಗಾಗಿ ಆಶ್ನಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.