ಮಂಗಳೂರು, ಜು. 21 : ನಗರದ ಕೊಡಿಯಾಲಬೈಲು ಸಮೀಪ ಭಗವತಿ ನಗರದಲ್ಲಿರುವ ಮಹಾಲಸಾ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ವಾರ್ಷಿಕ ಕಲಾ ಪ್ರದರ್ಶನ ಜರಗಿತು.ವಾರ್ಷಿಕ ಕಲಾಪ್ರದರ್ಶನ ಹಾಗೂ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಅವರು ಇತರ ಗಣ್ಯರೊಂದಿಗೆ ಸೇರಿ ಉದ್ಘಾಟಿಸಿದರು.
ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಕಾರಂಜಿ ಇನ್ಫೋಟೆಕ್ ಪೈ.ಲಿ. ನಿರ್ದೇಶಕ ವಿಕ್ರಮ್ ಕೆಮ್ಮೆ ಮತ್ತು ಸಂಸ್ಥೆಯ ಅಧ್ಯಕ್ಷ ಬಾಬು ರಾವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು.
ವಾರ್ಷಿಕ ಕಲಾ ಪ್ರದರ್ಶನದಲ್ಲಿ ಕ್ರಿಯೇಟಿವ್ ಪೈಂಟಿಂಗ್, ಕಲಂಕಾರಿ ಸಾಂಪ್ರದಾಯಿಕ ಕಲೆ, ರಿಯಲಿಸ್ಟಿಕ್ ಪೈಂಟಿಂಗ್, ಸಾಂಪ್ರದಾಯಿಕ ಕಲೆಗಳು, ತಾಂಜಾವೂರುಸಾಂಪ್ರದಾಯಿಕ ಕಲೆ, ಪಠಚಿತ್ರ, ಆಯಿಲ್ ಪೈಂಟ್, ಕೈಯಿಂದಮಾಡಲಾದ ಗ್ರಾಫಿಕ್ ಡಿಸೈನ್, ಪೆನ್ಸಿಲ್ ಆರ್ಟ್, ಚಾರ್ಕೋಲ್ ಡ್ರಾಯಿಂಗ್, ಭಾವಚಿತ್ರ, ವ್ಯಕ್ತಿಚಿತ್ರ, ಮಂಡಲ ಡಿಸೈನ್ ಸೇರಿದಂತೆ 500ಕ್ಕೂ ಅಧಿಕ ಚಿತ್ರಗಳನ್ನು ಪ್ರದರ್ಶನ ಕ್ಕಿಡಲಾಗಿದೆ. ಸುಮಾರು 160 ವಿದ್ಯಾರ್ಥಿಗಳು ವರ್ಷವಿಡಿ ಬಿಡಿಸಿರುವ ಕಲಾಕೃತಿಗಳ ಪೈಕಿ ಆಯ್ದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಕಾಲೇಜಿನ ವಿದ್ಯಾರ್ಥಿಗಳ ಕಲಾ ಕುಂಚದಿಂದ ಅರಳಿದ ನೂರಾರು ಚಿತ್ರಗಳು ಪ್ರದರ್ಶನಗೊಂಡವು. 15 ವರ್ಷದಿಂದ ಚಿತ್ರ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಲಾ ಪ್ರೇಮಿಗಳು ನೆಚ್ಚಿಕೊಂಡು ಚಿತ್ರ ಗಳನ್ನು ಖರೀದಿಸಲು ಅವಕಾಶವಿದೆ. ಕಾಲೇಜಿನ ಅಧ್ಯಾಪಕರ ಮಾತು.