ಮಂಗಳೂರು, ಆ. 11 : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯವೃಂದದಿಂದ ನಗರದ ಉರ್ವ ಸ್ಟೋರ್ ಡಾ|| ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಶನಿವಾರ ಹಾಗೂ ರವಿವಾರ ಯಕ್ಷ ಸಿದ್ದಿ ದಶಯಾನ ಕಾರ್ಯಕ್ರಮ ನಡೆಯಿತು.
ಯಕ್ಷ ಸಿದ್ದಿ ದಶಯಾನ ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾಂಸ ವಾಸುದೇವ ರಂಗಾ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು , ರಕ್ಷಿತ್ ಶೆಟ್ಟಿ ಪಡ್ರೆ ಅವರು ಬೇರೆ ಬೇರೆ ಕಡೆಯ ಶಿಷ್ಯವೃಂದವನ್ನು ಒಟ್ಟುಗೂಡಿಸಿ ಸಿದ್ಧಿ ದಶಯಾನ ಕಾರ್ಯಕ್ರಮ ಆಯೋಜಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಸಿದ್ಧಿ ದಶಯಾನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂ ಅಧ್ಯಕತೆ ವಹಿಸಿ ಮಾತನಾಡಿದ ಅವರು, ಇಂದಿನ ಯುವಜನತೆಗೆ ಕರಾವಳಿಯ ಸಾಂಸ್ಕೃತಿಕ ಕಲೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಯಕ್ಷಗಾನ ತಂಡಗಳಿಂದ ಆಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯಕ್ಷ ಸಾಧಕರನ್ನು ಸನ್ಮಾನಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಗಣೇಶ್ ಕುಲಾಲ್, ಕದ್ರಿ ಪೊಲೀಸ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ಎಎಸ್ಐ ಸುಧಾಕರ ರಾವ್ ಪಾಟೀಲ್, ಪಡ್ರೆ ಶ್ರೀ ದೂಮಾವತಿ ಚಾವಡಿ ಮನೆ ಗಡಿ ಪ್ರಧಾನರಾದ ಬಾಬು ಭಂಡ್ರಿಯಾಲ್, ಅಂಬಾ ಭವಾನಿ ಭಜನ ಮಂದಿರ ಜಲ್ಲಿಗುಡ್ಡೆ ಇದರ ಗೌರವಾಧ್ಯಕ್ಷ ಹರಿಕೇಶವ ಜಾದವ್, ಹಿರಿಯ ವಕೀಲ ಸದಾಶಿವ ಐತಾಳ್, ಉದ್ಯಮಿ ಅಗರಿ ರಾಘವೇಂದ್ರ ರಾವ್, ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಘಾಟನೆಯ ಬಳಿಕ ಯಕ್ಷಗಾನ ಪ್ರದರ್ಶನ ನಡೆಯಿತು.
ಬೆಳಗ್ಗೆ ಚೌಕಿಪೂಜೆ, ಪೂರ್ವರಂಗ ನಡೆಯಿತು. ಸಂಜೆ ಸಭಾ ಕಾರ್ಯಕ್ರಮ, ಬಳಿಕ ಯಕ್ಷನವರಸ ವೈಭವ, ವಿನೂತನ ಪ್ರಯೋಗ ಹಿಮ್ಮಿಂಚು ಯಕ್ಷಗಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ರಾಧಾಕೃಷ್ಣ ನಿರೂಪಿಸಿದರು. ತುಜಯಕರ ಶೆಟ್ಟಿ ಸ್ವಾಗತಿಸಿದರು. ದಿವ್ಯಾ ಶೆಟ್ಟಿ ವಂದಿಸಿದರು.