ಉಳ್ಳಾಲ, ಆ.18 : ಉಳ್ಳಾಲ ದರ್ಗಾ ವಠಾರದಲ್ಲಿರುವ ಮದನಿ ಸಭಾಂಗಣದಲ್ಲಿ ಉಳ್ಳಾಲ ದರ್ಗಾ ನೂತನ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಪ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂದಪುರಂ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಹಾಗೆನೇ ಅವರು ಉಳ್ಳಾಲ ಜುಮಾ ಮಸ್ಜಿದ್ ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಉಳ್ಳಾಲ ದರ್ಗಾ ವಠಾರದಲ್ಲಿ ನಡೆದ ಸಯ್ಯಿದ್ ಮದನಿ ಶರೀಅತ್ ಕಾಲೇಜು ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ನೂತನ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಪ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂದಪುರಂ ಅವರು, ಗುರುಗಳ,ಹಿರಿಯರ ಆಶೀರ್ವಾದದಿಂದ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ಧಾರ್ಮಿಕ ಶಿಕ್ಷಣ ನೀಡುವತ್ತ ಹೆಜ್ಜೆ ಇಟ್ಟೆ. ಅದರಿಂದ ಇಲ್ಲಿಯವರೆಗೆ ತಲುಪಿದೆ, ಮಡವೂರು ಶೈಖ್ ರವರ ಸೂಚನೆ ಮೇರೆಗೆ ಮರ್ಕಝ್ ಕಾಲೇಜು ಸ್ಥಾಪನೆ ಮಾಡಲಾಯಿತು. ಈ ಕಾಲೇಜು ಸ್ಥಾಪನೆ ಮಾಡುವ ಮೂಲಕ ಜವಾಬ್ದಾರಿಯುತವಾದ ಸ್ಥಾನ ವಹಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಉಳ್ಳಾಲ ಜುಮಾ ಮಸ್ಜಿದ್ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸೇವೆ ನೀಡಿದೆ ಎಂದು ಹೇಳಿದರು.
ಸ್ಪೀಕರ್ ಯುಟಿ ಖಾದರ್ ಮಾತನಾಡಿ, ನೂತನ ಖಾಝಿಯಾಗಿ ಅಧಿಕಾರ ಸ್ವೀಕರಿಸಿ ದ ಇಂಡಿಯನ್ ಗ್ರಾಂಡ್ ಮುಪ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂದಪುರಂ ಅವರಿಗೆ ಬಹಳಷ್ಟು ಜವಾಬ್ದಾರಿ ಇದೆ. ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದ ಅವರು ಈ ಸ್ಥಾನಕ್ಕೆ ಸರ್ವತಾ ಅರ್ಹರು. ಉಳ್ಳಾಲದಲ್ಲಿ 1982 ರಲ್ಲಿ ದರ್ಗಾ ವತಿಯಿಂದ ಆಸ್ಪತ್ರೆ ಆರಂಭ ಆಗಿದೆ. ತಾನು ದುಡ್ಡುಮಾಡಬೇಕು ಎಂಬ ಗುರಿ ಇಡುವ ಬದಲು ಸಮಾಜಕ್ಕೆ ಸೇವೆ ನೀಡಬೇಕು ಎಂಬ ಉದ್ದೇಶ ಇಟ್ಟು ಕೊಂಡಿದ್ದರು, ಎರಡು ವರ್ಷಗಳ ಒಳಗೆ ಉಳ್ಳಾಲಕ್ಕೆ 24 ಗಂಟೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ತಿಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.
ಸಯ್ಯಿದ್ ಅಲಿ ಬಾಫಖೀ ತಂಙಳ್ ದುಆ ನೆರವೇರಿಸಿದರು. ಈ ಸಂದರ್ಭ ಸುಲ್ತಾನುಲ್ ಉಲಮಾ ಕಾಂದಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಖಾಝಿ ಸ್ಥಾನ ಅಲಂಕರಿಸಿದರು. ಸಯ್ಯಿದ್ ಹಾಮಿದ್ ಇಂಬಿಚ್ಚಿಕ್ಕೋಯ ತಂಙಳ್ ಖಾಝಿಯವರಿಗೆ ಪೇಟ ತೊಡಿಸಿದರು, ಜಮಾಅತ್ ನ 28 ಮೊಹಲ್ಲಾ ಗಳ ಅಧ್ಯಕ್ಷರುಗಳು ಎಪಿ ಉಸ್ತಾದ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಈಸುಲ್ ಉಲಮಾ ಇ.ಸುಲೈಮಾನ್ ಉಸ್ತಾದ್ ಮಾತನಾಡಿ,ಎ.ಪಿ.ಉಸ್ತಾದ್ ಖಾಝಿ ಆಗಿ ಜವಾಬ್ದಾರಿ ವಹಿಸಿದ್ದಾರೆ. ಎ.ಪಿ ಉಸ್ತಾದರು ಖಾಝಿ ಆಗಿ ಲಭಿಸಿದ್ದು ನಮಗೆ ನಮ್ಮ ಬಾಗ್ಯ, ಖಾಝಿ ಆದವರಿಗೆ ಜವಾಬ್ದಾರಿ ಇರುತ್ತದೆ.ಅದನ್ನು ನಿರ್ವಹಣೆ ಮಾಡುವುದು ಕರ್ತವ್ಯ ಆಗಿರು ತ್ತದೆ. ಈ ಜವಾಬ್ದಾರಿಯುತ ಸ್ಥಾನದಲ್ಲಿ ಎಪಿ ಉಸ್ತಾದ್ ಆಫಿಯತ್ತಿನೊಂದಿಗೆ ದೀರ್ಘಕಾಲ ಮುಂದುವರಿಯಲಿ ಎಂದು ಹೇಳಿದರು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಿ ಖಾಝಿ ಸ್ಥಾನದ ಮಹತ್ವದ ಬಗ್ಗೆ ಮಾತನಾಡಿದರು.
ಜಲಾಲುದ್ದೀನ್ ತಂಙಳ್ ಪೊಸೋಟು, ಕೇಂದ್ರ ಜುಮಾ ಮಸ್ಜಿದ್ ಖತೀಬ್ ಇಬ್ರಾಹಿಂ ಸಅದಿ, ಅಶ್ರಫ್ ತಂಙಳ್ ಆದೂರು, ಸಯ್ಯಿದ್ ಮದನಿ ಶರೀಅತ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ, ಶಾಫಿ ಸಅದಿ ಬೆಂಗಳೂರು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪೌರಾಡಳಿತ ಸಚಿವ ರಹೀಮ್ ಖಾನ್, ಯುಟಿ ಇಫ್ತಿಕಾರ್ ಅಲಿ, ಯೆನೆಪೋಯ ಸಮೂಹ ಸಂಸ್ಥೆಯ ಚೆರ್ಮೇನ್ .ವೈ ಅಬ್ದುಲ್ಲಾ ಕುಂಞಿ ಹಾಜಿ ಯೆನೆಪೋಯ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಯು.ಕೆ ಮೋನು ಕಣಚೂರು, ಮಾಜಿ ಡಿವೈಎಸ್ಪಿ ಜಿ.ಎ.ಬಾವ, ಎಸ್.ಎಂ.ರಶೀದ್ ಹಾಜಿ, ಮಾಜಿ ಸಚಿವ ಸಿ ಎಂ ಇಬ್ರಾಹಿಂ , ಮಾಜಿ ಅಧ್ಯಕ್ಷ ಹಂಝ ಹಾಜಿ,ಅಲ್ ಮದೀನಾ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ,ಅಶ್ ರಿಯ್ಯ ಮುಹಮ್ಮದ್ ಅಲಿ ಸಖಾಫಿ, ಅಬ್ದುಲ್ ರಹಿಮಾನ್ ಮದನಿ ಜೆಪ್ಪು, ಅಬ್ದುಲ್ ರಶೀದ್ ಝೈನಿ, ಹುಸೈನ್ ಸಅದಿ ಕೆಸಿರೋಡು, ಅಬೂ ಝಿಯಾದ್ ಮದನಿ ಪಟ್ಟಾಂಬಿ, ಮುಹಮ್ಮದ್ ಫೈಝಿ ಮೋಂಙಂ, ಹಸನ್ ಅಬೂಬಕ್ಕರ್ ಅಶ್ರಫಿ ಬೋಂಬೈ, ಅಮೀನ್ ಹಾಜಿ ಮಂಗಳೂರು, ಅಬ್ದುಲ್ ರಶೀದ್ ಮದನಿ ಆಲಪ್ಪುಝ, ಮಹಮೂದ್ ಹಾಜಿ ಕೋಟೆಪುರ, ಅಬ್ದುಲ್ ರಹ್ಮಾನ್ ಮದನಿ ಮೂಳೂರು, ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಹಸೈನಾರ್ ಕೋಟೆಪುರ, ಕೋಶಾಧಿಕಾರಿ ನಾಝಿಮ್, ಅಡಿಟರ್ ಫಾರೂಕ್, ಕಾರ್ಯದರ್ಶಿ ಇಸಾಕ್, ಮುಸ್ತಫ, ಸಯ್ಯಿದ್ ಮದನಿ ದರ್ಗಾ, ಚಾರಿಟೇಬಲ್ ಟ್ರಸ್ಟ್, ಅರಬಿಕ್ ಟ್ರಸ್ಟ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು.ಪ್ರಾಸ್ತಾವಿಕವಾಗಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಮಾತಾಡಿದರು.