ಕಾಸರಗೋಡು, ಆ.20 : ವಿದ್ಯುತ್ ಶಾಕ್ ತಗುಲಿ ಯಶವಂತ ಎಂಬವರು ಸಾವನ್ನಪ್ಪಿದ ಘಟನೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ಸೋಮವಾರ ನಡೆದಿದೆ. ಮಂಜೇಶ್ವರ ಹೊಸಬೆಟ್ಟುವಿನ ನಿವಾಸಿ ಯಶವಂತ (21) ಮೃತರು.
ಸಂಜೆ ಮನೆಯ ಟೆರೇಸ್ ನಲ್ಲಿ ಬಿದ್ದಿದ್ದ ಮಡಲನ್ನು ತೆಗೆಯಲು ತೆರಳಿದ್ದ ಯಶವಂತ ಅವರು, ಮರದ ಹತ್ತಿರದಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ತಂತಿಯಿಂದ ಶಾಕ್ ತಗುಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಯಶವಂತ ಸುಮಾರು ಹೊತ್ತು ಕಳೆದರೂ ಮರಳಿ ಬಾರದ ದಿದ್ದುದರಿಂದ ಸಹೋದರಿ ಟೆರೇಸ್ ಗೆ ಹತ್ತಿ ನೋಡಿದಾಗ ಯಶವಂತ ಬಿದ್ದಿರುವುದು ಕಂಡುಬಂದಿದೆ.ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಯಶವಂತ ಅವರು ಮೃತ ಪಟ್ಟಿದ್ದರು ಎನ್ನಲಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.