ಮಂಗಳೂರು, ಆ. 24 : ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದ ಹರ್ಷಿತ್ ಸೋಮೇಶ್ವರ ನಿರ್ದೆಶನದ ಅನರ್ಕಲಿ ತುಳು ಸಿನೆಮಾ ಶುಕ್ರವಾರ ಬಿಡುಗಡೆಗೊಂಡಿದೆ.
ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಮಾತಾನಾಡಿ ಒಳ್ಳೆಯ ಸಿನೆಮಾ ಹಾಗೂ ಒಳ್ಳೆಯ ಪ್ರಯತ್ನವನ್ನು ತುಳುನಾಡಿನ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ. ಅನರ್ಕಲಿ ಸಿನೆಮಾ ನೋಡಿ ಪ್ರೋತ್ಸಾಹಿಸಿ ಎಂದರು.
ಚಿತ್ರದ ನಟ ಅರವಿಂದ್ ಬೋಳಾರ್ ಮಾತನಾಡಿ , ಪ್ರೇಕ್ಷಕರು ಥಿಯೇಟರ್ಗೆ ಬಂದು ಸಿನೆಮಾಗಳನ್ನು ನೋಡಿದಲ್ಲಿ ನಿರ್ಮಾಪಕ ಹಾಕಿದ ಬಂಡವಾಳ ಬಂದುಬಿಡುತ್ತದೆ. ಇದರಿಂದ ನಿರ್ಮಾಪಕ ಲಾಸ್ ಆಗಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಿಶೋರ್ ಡಿ.ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ನವನೀತ್ ಶೆಟ್ಟಿ ಆರ್. ಧನರಾಜ್, ಭೋಜರಾಜ ವಾಮಂಜೂರು, ಚಂದ್ರಶೇಖರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಲಂಚುಲಾಲ್, ವಿಜಯ್ ಶೋಭರಾಜ್ ಪಾವೂರು, ಮಧುರಾ ಆರ್.ಜೆ., ಪುರುಷೋತ್ತಮ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಭಂಡಾರಿ ಅಡ್ಯಾರ್, ಪ್ರದೀಪ್ ಆಳ್ವ ಕದ್ರಿ, ಗಿರೀಶ್ ಎಂ. ಶೆಟ್ಟಿ ಕಟೀಲು, ದಿವಾಕರ ಶೆಟ್ಟಿ ಮೋಹನ್ ಕೊಪ್ಪಲ, ಇಸ್ಮಾಯಿಲ್ ಮೂಡುಶೆಡ್ಡೆ, ತಾರಾನಾಥ್ ಶೆಟ್ಟಿ ಬೋಳಾರ್, ಜಗನ್ನಾಥ ಶೆಟ್ಟಿ ಬಾಳ, ಲೋಕಯ್ಯ ಶೆಟ್ಟಿ ಮುಂಚೂರು, ಯಶೋದಾ ಸಂಜೀವ ಕೋಟ್ಯಾನ್, ರಜನೀಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಮಧುರಾ ಆರ್. ಜೆ. ನಿರೂಪಿಸಿದರು.
ಈ ಚಿತ್ರದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು , ನಾಯಕ ನಟನಾಗಿ ವಿಜಯ್ ಶೋಭರಾಜ್ ಪಾವೂರು, ನಾಯಕಿಯಾಗಿ ಮಧುರಾ ಆರ್. ಜೆ. ಅಭಿನಯಿಸಿದ್ದಾರೆ.
ಚಿತ್ರವು ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನೆಮಾಸ್, ಸಿನೆಪೊಲಿಸ್ ಸುರತ್ಕಲ್ ನಲ್ಲಿ ನಟರಾಜ್, ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್ ಸಿನೆಮಾಸ್, ಉಡುಪಿಯಲ್ಲಿ ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಭಾರತ್ ಸಿನೆಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನೆಮಾಸ್ನಲ್ಲಿ ಬಿಡುಗಡೆಗೊಂಡಿದೆ.