ಮಂಗಳೂರು, ಆಗಸ್ಟ್ 29: ಫಿನಿಕ್ಸ್ ಫಿಲ್ಮ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ದಿ ಜರ್ನಿ ಆಫ್ ಬೆಳ್ಳಿ ಕನ್ನಡ ಚಿತ್ರವು ಸೆ.13ರಂದು ತೆರೆ ಕಾಣಲಿದೆ ಎಂದು ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಚಲನಚಿತ್ರದ ನಿರ್ಮಾಪಕ ಮಹೇಂದ್ರ ಕುಮಾರ್ ಅವರು ಹೇಳಿದರು.
ಸೈನಿಕ ಮತ್ತು ಮಗಳ ಭಾಂದವ್ಯದ ಮೇಲಿನ ಕಥೆ ಈ ಚಿತ್ರದಲ್ಲಿದೆ . ಪುಟ್ಟ ಬಾಲಕಿ ಬೆಳ್ಳಿಯ ಪಾತ್ರದಲ್ಲಿ ಎಸ್.ಪಾಟೀಲ್ ಅಭಿನಯಿಸಿದ್ದು, ಗೌರಿ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಅಡಿಶನ್‌ಗೆ ಬಂದಿದ್ದ 35 ಬಾಲ ಪ್ರತಿಭೆಗಳಲ್ಲಿ ಸಮನ್ವಿ ಯನ್ನು ಆಯ್ಕೆ ಮಾಡಲಾಗಿತ್ತು. ಬೆಳ್ಳಿ ಚಿತ್ರದಲ್ಲಿ ಒಂದು ಹಾಡು ಇದೆ ಎಂದವರು ಹೇಳಿದರು.
ಉತ್ತಮ ನಟನೆಯ ಮೂಲಕ ಚಿತ್ರಕ್ಕೆ ಸಮನ್ವಿ ಬಾಲ ನಟಿಯಾಗಿ ಜೀವ ತುಂಬಿದ್ದಾರೆ ಎಂದು ನಿರ್ದೇಶಕಿ ಗೌರಿ ಶ್ರೀನಿವಾಸ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಅಮರ್‌ನಾಥ್ ರೈ, ರಾಜ್ ಗೋಪಾಲ್ ರೈ, ಶಂಕರ್, ಕಿರಣ್ ಕುಮಾರ್, ಮನೋಜ್ ಕುಮಾರ್ ಉಪಸ್ಥಿತರಿದ್ದರು.