ಸುರತ್ಕಲ್, ಸೆ. 3: ಕರ್ನಾಟಕ ಸೇವಾ ವೃಂದ ಸುರತ್ಕಲ್ ಇದರ ವತಿಯಿಂದ 59ನೇ ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮ ಅ. 27 ರಂದು ಸುರತ್ಕಲ್ ಲೋಕಯ್ಯ ಶೆಟ್ಟಿ ಸ್ಮಾರಕರಂಗ ಮಂದಿರದಲ್ಲಿ ನಡೆಯಿತು.
ಕ್ಯಾ| ಬ್ರಿಜೇಶ್ ಚೌಟ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ವೃಂದದ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅದಾನಿ ಸಂಸ್ಥೆಯ ಇಡಿ ಕಿಶೋರ್ ಆಳ್ವ, ಬಿಎಎಸ್‌ಎಫ್ನ ಹಿರಿಯ ಮ್ಯಾನೇಜರ್ ಸಂತೋಷ್ ಪೈ, ಎಂಆರ್ ಪಿಎಲ್ನ ಅಧಿಕಾರಿ ಕಿರಣ್, ವೇ। ಮೂ. ರಂಗ ಐತಾಳ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಮ್ಮಾನ, ಕಂಬಳದಲ್ಲಿ ಸಾಧನೆಗೈದ ಯೋಗೀಶ್ ಕರಿಯ ಪೂಜಾರಿ ಅವರಿಗೆ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಸೇವಾ ವೃಂದವು ಕೈಗೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಡಿ.ಕೆ. ಶೆಟ್ಟಿ ನೋಟರಿ, ನ್ಯಾಯವಾದಿ ಆರತಿ ಸುರತ್ಕಲ್, ಉದ್ಯಮಿ ಹರೀಶ್ ಶೆಟ್ಟಿ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕುಡಿಕೆ ಒಡೆಯುವ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.