ಸುರತ್ಕಲ್, ಸೆ. 18 : ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ಸುರತ್ಕಲ್ ಶಾಖೆ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆಯು ಸುರತ್ಕಲ್ ನಲ್ಲಿರುವ ಅಂಚೆ ಕಚೇರಿ ಮುಂಭಾಗದ ಶಂಕರ ಸದನ ಕಟ್ಟಡದಲ್ಲಿ ಮಂಗಳವಾರ ಜರಗಿತು.
ಶಾಸಕರಾದ ಡಾ| ಭರತ್ ಶೆಟ್ಟಿ ವೈ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ರಂಗದಿಂದ ಸ್ಥಳೀಯ ಕಿರು ಉದ್ಯಮಿಗಳು ಹಾಗೂ ಜನತೆಗೆ ಉತ್ತಮ ಸೇವೆ ದೊರಕುತ್ತಿದೆ. ರಾಷ್ಟೀಕೃತ ಬ್ಯಾಂಕ್ ಗಳಿಗಿಂತ ಸಹಕಾರ ಸಂಘಗಳಲ್ಲಿ ಸುಲಭ ಮತ್ತು ವ್ಯಕ್ತಿ ಆಧಾರಿತ ಬ್ಯಾಂಕಿಂಗ್ ಸೇವೆಗೆ ಸೂಕ್ತ ಅವಕಶವಿದ್ದು,ಸಹಕಾರಿಗಳು ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆನ್ನು ನೀಡಲು ಸಾದ್ಯವಿದೆ. ಗ್ರಾಹಕರು ಇದರ ಉಪಯೋಗವನ್ನು ಪಡೆಯಬೇಕು. ಸವಿತಾ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, 12 ವರ್ಷಗಳ ಅತ್ಯಲ್ಪ ಅವಧಿ ಯಲ್ಲಿಯೇ 4ನೇ ಶಾಖೆ ತೆರೆದಿರುವುದು ಸವಿತಾ ಸೌಹಾರ್ದ ಸಹಕಾರಿಯ ಉತ್ತಮ ಬೆಳವಣಿಗೆ. ಈ ಸಹಕಾರಿಯಿಂದ ಜನರಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದರು.
ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಎಸ್ ಸಿಡಿಸಿಸಿ ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಕೊಂಬಿಲ ಅವರು ಕಚೇರಿಯನ್ನು, ಉಡುಪಿ ಜಿಲ್ಲಾ ಪೆರಿಯಾಳ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಜಯಂತ ಸುವರ್ಣ ಬಜಪೆ ಅವರು ಭದ್ರತಾ ಕೋಶವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷ ವರುಣ್ ಚೌಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸವಿತಾ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಂಟ್ವಾಳ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಸತೀಶ್ ಸದಾನಂದ್, ರಮೇಶ್ ಭಂಡಾರಿ ಬೊಟ್ಯಾಡಿ ಹಾಗೂ ಕುಶಲ ಅವರನ್ನು ಸಮ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ದ.ಕ. ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ, ಮನಪಾ ಸದಸ್ಯೆ ನಯನಾ ಆರ್. ಕೋಟ್ಯಾನ್, ಸರಿತಾ ಶಶಿಧರ್, ಸುರತ್ಕಲ್ ಸವಿತಾ ಸಮಾಜದ ಅಧ್ಯಕ್ಷ ಜಗದೀಶ್, ಮಂಗಳೂರು ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಮುರಳೀಧರ ಭಂಡಾರಿ, ಕುಳಾಯಿ ಭವಾನಿ ವಿಠಲ ಭಂಡಾರಿ, ಕಟ್ಟಡದ ಮಾಲಕ ಐ. ವಿಠಲ ಹಾಗೂ ಸಂಸ್ಥೆಯ ನಿರ್ದೇಶಕರಾದ ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ್ ಭಂಡಾರಿ ಪ್ರೊತಾಜೆ, ಭುಜಂಗ ಸಾಲಿಯಾನ್ ಬಿ.ಸಿ. ರೋಡ್,ಪದ್ಮನಾಭ ಭಂಡಾರಿ ಸುಳ್ಯ, ಎಸ್.ರವಿ ಮಡಂತ್ಯಾರು, ವಸಂತ ಎಂ.ಬೆಳ್ಳೂರು, ಆಶಾ ಕಂದಾವರ, ಸುಮಲತಾ ಸುರೇಂದ್ರ ಪುತ್ತೂರು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸುರೇಶ್ ನಂದೊಟ್ಟು ಸ್ವಾಗತಿಸಿ,ನಿರ್ದೇಶಕ ದಿನೇಶ್ ಎಲ್.ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಇಒ ಕಿಶನ್ ಎಸ್. ವಂದಿಸಿದರು.