ಮಂಗಳೂರು, ಸೆ.24 : ನಗರದ ವೆಲೆನ್ಸಿಯಾ ನಿವಾಸಿ ಹಾಗೂ ರಾಜ್ಯದ ಹಿರಿಯ ಸಾಮಾಜಿಕ ಹೋರಾಟಗಾರ ಪಿ.ಬಿ.ಡೇಸಾ (83) ಅವರು ಇಂದು ನಗರದ ಆಸ್ಪತ್ರೆಯಲ್ಲಿ ನಿಧನರಾದರು.
ಪಿ.ಬಿ.ಡೇಸಾ ಅವರು ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ (ಪಿಯುಸಿಎಲ್) ರಾಜ್ಯಾಧ್ಯಕ್ಷರಾಗಿದ್ದರು. ಇವರು ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರಾಗಿದ್ದರು. ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಮೃತರು ಅಗಲಿದ್ದಾರೆ.