ಉಳ್ಳಾಲ, ಅ.16 : ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಅಂಚಿನ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಡೂರು ಶಾರದಾ ನಗರ ಎಂಬಲ್ಲಿ ಬುಧವಾರ ನಡೆದಿದೆ.ಮೃತರನ್ನು ಮಾಡೂರು ನಿವಾಸಿ ನಾಗೇಶ್(51) ಎಂದು ಗುರುತಿಸಲಾಗಿದೆ.
ಮೃತರು ಖಾಸಗಿ ಆಸ್ಪತ್ರೆಯಲ್ಲಿ ಬಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ನಾಗೇಶ್ ಅವರು ಬುಧವಾರ ಕೆಲಸಕ್ಕೆ ರಜೆಯಿದ್ದ ಕಾರಣ ಬೀರಿ ಪೇಟೆಯಿಂದ ಸ್ಕೂಟರಲ್ಲಿ ತೆಂಗಿನ ಕಾಯಿಗಳನ್ನು ಖರೀದಿಸಿ ಮನೆಗೆ ಹೋಗುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.