ಸುಳ್ಯ,ಅ.17: ವಲಯ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಸದಸ್ಯ, ದಿವಾಕರ ಮುಂಡಾಜೆ (55) ಅವರು ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು.
ದಿವಾಕರ್ ಅವರು ಬುಧವಾರ ಬೆಳಿಗ್ಗೆ ತನ್ನ ಅಂಗಡಿಗೆ ತನ್ನ ಕಾರಲ್ಲಿ ಬರುತ್ತಿದ್ದ ವೇಳೆ ದಾರಿ ಮಧ್ಯೆ ಹೃದಯಾಘಾತದಿಂದ ಮೃತರಾಗಿದ್ದಾರೆ. ದಿವಾಕರ್ ಅವರು ಹರಿಹರದಲ್ಲಿ ಸ್ಟುಡಿಯೋ, ಅಂಗಡಿಯನ್ನು ಹೊಂದಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇರಿದಂತೆ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.