ಕಾರ್ಕಳ, ನ.24 : ಖಾಸಗಿ ಶಾಲಾ ವಾಹನ ಮತ್ತು ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿಯಾರು-ಜೋಡುಕಟ್ಟೆ ಎಂಬಲ್ಲಿ ನ.23ರಂದು ನಡೆದಿದೆ.
ಮೃತರನ್ನು ಕರಲಗುಡ್ಡೆ ಸುರೇಖಾ ನಗರದ ನಿವಾಸಿ ಅಜಿತ್ ಕುಮಾರ್(21ಎಂದು ಗುರುತಿಸಲಾಗಿದೆ.
ಬಸ್ ಮದ್ಯ ಭಾಗಕ್ಕೆ ಬೈಕ್ ಢಿಕ್ಕಿಯಾಗಿದ್ದು, ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂದರ್ಭ ಶಾಲೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಇರಲಿಲ್ಲಎನ್ನಲಾಗಿದೆ.
ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.