ಮಂಗಳೂರು, ನ.25 : ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ. ಶಿರಸಿ ಇದರ ಮಂಗಳೂರಿನ ಶಾಖೆ ಕದ್ರಿ ಕಂಬಳದ ವ್ಯಾಸರಾವ್ ರಸ್ತೆಯ ವರ್ಟೆಕ್ಸ್ ಟಿಆರ್ ನ ನೆಲ ಮಹಡಿಯಲ್ಲಿಭಾನುವಾರ ಶುಭಾರಂಭಗೊಂಡಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಸಿಸಿಐ ಅಧ್ಯಕ್ಷ ಭಾರತ್ ಬೀಡಿ ವಕ್ಸ್ ೯ ಪೈ.ಲಿ. ವ್ಯವಸ್ಥಾಪಕ ನಿರ್ದೇಶಕ ಆನಂದ್ ಜಿ. ಪೈ ಅವರು ಮಾತನಾಡಿ, ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಮಂಗಳೂರು ನಗರದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿ, ವಿವಿಧ ಕಡೆಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಉನ್ನತಿ ಸಾಧಿಸಲಿ ಎಂದು ಶುಭಹಾರೈಸಿದರು.
ಹ್ಯಾಂಗ್ಯೂ ಐಸ್ ಕ್ರೀಮ್ ಪೈ ಲಿ. ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ ಅವರು ಮಾತನಾಡಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ತನ್ನ ಬ್ಯಾಂಕಿಂಗ್ ಕ್ಷೇತ್ರವನ್ನು ಮಂಗಳೂರಿಗೂ ವಿಸ್ತರಿಸಿದ್ದು, ಇಲ್ಲಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ. ಶಿರಸಿ ಅಧ್ಯಕ್ಷ ಜೈದೇವ್ ಯು, ನಿಲೇಕಣಿ ಮಾತನಾಡಿ, 1905ರಲ್ಲಿ ಸ್ಥಾಪಿತವಾದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 110 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಗೆ ಮಾದರಿ ಸಹಕಾರಿ ಬ್ಯಾಂಕಿಂಗ್ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸಲು ಬ್ಯಾಂಕ್ ತನ್ನ ಕಾರ್ಯಾಚರಣೆಯ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿದೆ. ಇದೀಗ ಮಂಗಳೂರಿನಲ್ಲಿ ಬ್ಯಾಂಕ್ನ ಹೊಸಶಾಖೆ ಆರಂಭವಾಗಿದೆ. ನ.28 ರಂದು ಗದಗ ಹಾಗೂ ಧಾರವಾಡದಲ್ಲಿ ನೂತನ ಶಾಖೆ ತೆರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಂಡ್ ಸೋಭಾಣ್ ಅಧ್ಯಕ್ಷ ಜೋಕಿಮ್ಲೂಯಿಸ್ ಪಿಂಟೋಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಮುಕುಂದ್ ಎಂಜಿಎಂ ರಿಯಾಲಿಟಿ ಆಡಳಿತ ಪಾಲುದಾರ ಗುರುದತ್ ಶೆಣೈ, ಹಿರಿಯ ಹಣಕಾಸು ಅಧಿಕಾರಿ ಶ್ರೀಪತಿ ಭಟ್, ಡಿಜಿಎಂ ರಾಘವೇಂದ್ರ ಪೈ, ಹಿರಿಯ ಕಾನೂನು ಮತ್ತು ಆಡಳಿತಾಧಿಕಾರಿ ವಿಟ್ಠಲ ನಾಯಕ್, ಮುಖ್ಯ ಮಾಹಿತಿ ಮತ್ತು ವ್ಯವಸ್ಥೆ ಅಧಿಕಾರಿ ವಿಶಾಲ್ ಜಿ. ದೇವಿಮನೆ ಸಹಿತ ನಿರ್ದೇಶಕರು, ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.