ಬೆಂಗಳೂರು, ನ. 28 : ಕಳೆದ ತಿಂಗಳು ಕೇರಳದಲ್ಲಿ ಬಿಡುಗಡೆಯಾದ ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ ‘ಪಣಿ’ ಚಿತ್ರವು ಕನ್ನಡಕ್ಕೆ ಡಬ್ ಆಗಿ ನ. 29ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಅವರು ಕರ್ನಾಟಕದಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಜೋಜು ಜಾರ್ಜ್ ನಿರ್ದೇಶನದ ಈ ಚಿತ್ರವು ಕಳೆದ ತಿಂಗಳು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.ಇದೀಗ ಕನ್ನಡಕ್ಕೆ ಡಬ್ ಆಗಿ ನ. 29 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಇದೊಂದು ಮಾಸ್ ಮತ್ತು ಕಮರ್ಷಿಯಲ್ ಚಿತ್ರವಾಗಿದೆ.
ಇದೊಂದು ಕಾಲ್ಪನಿಕ ಕಥೆಯಾಗಿದ್ದು ಎರಡು ವರ್ಷಗಳ ಕಾಲ ಚರ್ಚೆ ನಡೆಸಿ ಚಿತ್ರಕಥೆ ಮಾಡಿದ್ದೇವೆ. ಈ ಚಿತ್ರದಲ್ಲಿ ಹೊಸಬರಿದ್ದಾರೆ. ಇದೊಂದು ಸರಳ ಕಥೆಯಾಗಿದ್ದು, ಅದನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಲಯಾಳಂನಲ್ಲಿ “ಪಣಿ” ಎಂದರೆ ಕೆಲಸ ಎಂದರ್ಥ. ಈ ಹಿಂದೆ ನನ್ನ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಕೇರಳದಲ್ಲಿ ಬಿಡುಗಡೆಯಾಗಿ ಈ ಚಿತ್ರ ಯಶಸ್ವಿಯಗಿದೆ. ಕನ್ನಡದಲ್ಲೂ ಕೂಡ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ ಎಂದು ನಿರ್ದೇಶಕ ಜೋಜು ಜಾರ್ಜ್ ಅವರು ತಿಳಿಸಿದ್ದಾರೆ.
‘ಹುಡುಗ್ರು’, ‘ಕಿಚ್ಚು’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಾಯಕಿ ಈಗ ಜೋಜು ಜಾರ್ಜ್ ಅವರ ಜೊತೆಗೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಜೋಜು ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಗರ್ ಸೂರ್ಯ, ಜುನೈಜ್, ಬಾಬ್ಬಿ ಕುರಿಯನ್, ಅಭಯಾ ಹಿರಣ್ಮಯಿ, ರಂಜಿತ್ ವೇಲಾಯುಧನ್ ಮುಂತಾದವರು ನಟಿಸಿದ್ದಾರೆ.