ಮಂಗಳೂರು,ನ.29 : ಭಾರತೀಯ ಏರ್ಟೆಲ್ ನ ಹೊಸ ಎಐ ಚಾಲಿತ ಸ್ಕ್ಯಾಮ್ ಪತ್ತೆ ಮಾಡುವ ವ್ಯವಸ್ಥೆಯು ಕರ್ನಾಟಕದ ಗ್ರಾಹಕರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸಿದೆ. ಏರ್ಟೆಲ್ ಗ್ರಾಹಕರಿಗೆ ಯಾವುದೇ ಆ್ಯಪ್ ಡೌನ್ಲೋಡ್ ಮಾಡದೆ ಉಚಿತವಾಗಿ ಲಭ್ಯವಾಗಲಿದೆ.
ಏರ್ಟೆಲ್ ಗ್ರಾಹಕರು ತಮ್ಮ ಎಲ್ಲ ಸಾಧನಗಳಲ್ಲಿ ಸ್ವಯಂಚಾಲಿತ ಸಕ್ರಿಯಗೊಳಿಸುವಿಕೆಯೊಂದಿಗೆ ಉಚಿತವಾಗಿ ಪರಿಹರಿಸಬಹುದು ಎಂದು ಭಾರ್ತಿ ಏರ್ಟೆಲ್ ನ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರು ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಗ್ರಾಹಕರು ಸ್ಯಾಮ್ ಕರೆಗಳಿಂದ ವಂಚನೆಗೊಳಗಾಗುತ್ತಿರುವುದನ್ನು ತಪ್ಪಿಸಲು ಏರ್ಟೆಲ್ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಸೇವೆ ಆರಂಭವಾದ 63 ದಿನಗಳಲ್ಲಿ ಈ ಟೆಲಿಕಾಂ ಪರಿಹಾರ ಕರ್ನಾಟಕದಲ್ಲಿ 682 ಮಿಲಿಯನ್ ಸಂಭಾವ್ಯ ಸ್ಯಾಮ್ ಕರೆಗಳು, 46 ಮಿಲಿಯನ್ ಸ್ಯಾಮ್ ಸಂದೇಶಗಳನ್ನು ಪತ್ತೆಹಚ್ಚಲಾಗಿದೆ ಎಂದರು.
ಏರ್ಟೆಲ್ ನ ಆಂತರಿಕ ಡೇಟಾ ವಿಜ್ಞಾನಿಗಳಿಂದ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಎಐ ಚಾಲಿತ ಪರಿಹಾರವು ಕರೆಗಳು, ಸಂದೇಶಗಳನ್ನು ‘ಶಂಕಿತ ಸ್ಯಾಮ್’ ಎಂದು ಗುರುತಿಸಲು, ವರ್ಗೀಕರಿಸಲು ಸ್ವಾಮ್ಯತೆಯ ಅಲ್ಗಾರಿದಂ ಅನ್ನು ಬಳಸಿಕೊಳ್ಳುತ್ತದೆ. ಅತ್ಯಾಧುನಿಕ ಎಐ ಅಲ್ಗಾರಿದಮ್ನಿಂದ ನಡೆಸಲ್ಪಡುವ ನೆಟ್ ವರ್ಕ್ ಕರೆ ಮಾಡುವವರ ವಿವರ ಅಥವಾ ಕಳುಹಿಸುವವರ ಬಳಕೆಯ ಮಾದರಿಗಳು, ಕರೆ, ಎಸ್ಎಂಎಸ್ ಆವರ್ತನ, ಹಲವಾರು ಇತರರ ಕರೆ ಅವಧಿಯಂತಹ ವಿವಿಧ ನಿಯತಾಂಶಗಳನ್ನು ನೈಜ ಸಮಯದ ಆಧಾರದ ಮೇಲೆ ವಿಶ್ಲೇಷಿಸುತ್ತದೆ. ತನಗೆ ತಿಳಿದಿರುವ ಸ್ಯಾಮ್ ಮಾದರಿಗಳ ವಿರುದ್ಧ ಈ ಮಾಹಿತಿಯನ್ನು ಅಡ್ಡ ಉಲ್ಲೇಖಿಸುವ ಮೂಲಕ ಶಂಕಿತ ಸ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ಸಿಸ್ಟಂ ನಿಖರವಾಗಿ ತಡೆಯುತ್ತದೆ ಎಂದು ರಜನೀಶ್ ವರ್ಮಾ ಅವರು ಮಾಹಿತಿ ನೀಡಿದರು.