ಉಳ್ಳಾಲ, ಡಿ. 03 : ಸಹ್ಯಾದ್ರಿ ಕೋ ಆಪರೇಟಿವ್ ಸೊಸೈಟಿಯು ತೊಕ್ಕೊಟ್ಟು ಭಟ್ಟಗರದ ಶಕ್ತಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ನ, 25, ಸೋಮವಾರ ಉದ್ಘಾಟನೆಗೊಂಡಿತು.
ಸಹ್ಯಾದ್ರಿ ಕೋ ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು, ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರಕುಮಾರ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ವಿಸ್ತಾರಗೊಳ್ಳುತ್ತಿದೆ. ಈಗ ಸಹ್ಯಾದ್ರಿ ಕೋ ಆಪರೇಟಿವ್ ಸೊಸೈಟಿ ಸಹಕಾರಿ ಕ್ಷೇತ್ರಕ್ಕೆ ಸೇರ್ಪಡೆ ಯಾಗುವ ಮೂಲಕ ಸ. ಕ್ಷೇತ್ರಕ್ಕೆ ಇನ್ನಷ್ಟು ಬಲ ಬರಲಿದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಗಣಕ ಯಂತ್ರಕ್ಕೆ ಚಾಲನೆ ನೀಡಿ ನಂತರ ಮಾತನಾಡಿ, ರಾಜೇಂದ್ರ ಕುಮಾರ್ ಅವರ ಮೂಲಕ ಉದ್ಘಾಟನೆಗೊಂಡಿರುವ ಈ ಸಂಸ್ಥೆ ಪ್ರಗತಿ ಕಾಣಲಿ, ಮುಖ್ಯವಾಗಿ ಠೇವಣಿದಾರ ಮತ್ತು ಸಾಲಗಾರರಿಗೆ ನೋವು ಆಗದ ರೀತಿಯಲ್ಲಿ ನೋಡಿಕೊಳ್ಳುವುದೇ ಸಹಕಾರಿ ಸಂಸ್ಥೆಯ ಗುಣವಾಗಿದೆ ಎಂದರು.
ಕಟೀಲು ದೇವಸ್ಥಾನದ ಆನುವಂಶಿಕ ಮೊತ್ತೇಸರರು ಮತ್ತು ಮತ್ತು ಪ್ರಧಾನ ಅರ್ಚಕರಾಗಿರುವ ವೇ ಬ್ರಹ್ಮಶ್ರೀ ಪದ್ಮನಾಭ ಅಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.ಕುದ್ರೋಳಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹ್ಯಾದ್ರಿ ಕೋ ಸೊಸೈಟಿ ಅಧ್ಯಕ್ಷ ಕೆ.ಟಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತಸರ ಸುರೇಶ್ ಭಟ್ನಗರ, ಮಾಂಡ್ ಸೋಭಾಣ್ ಅಧ್ಯಕ್ಷ ಲೂಯಿಸ್ ಜೆ.ಪಿಂಟೋ, ಸಹ್ಯಾದ್ರಿ ಕೋ ಸೊಸೈಟಿ ಉಪಾಧ್ಯಕ್ಷ ಎ.ಜೆ.ಶೇಖರ್, ನಿರ್ದೇಶಕರಾದ ಸತೀಶ್ ಕರ್ಕೇರ, ಬಾಬು ಕಿನ್ಯ, ಬಿ.ಡಿ.ಗೋಪಾಲ್, ದಿನೇಶ್ ಕೆ.ಅತ್ತಾವರ, ಆನಂದ ಕೆ.ಅಸೈಗೋಳಿ, ಶಿವಪ್ರಸಾದ್, ಮಾಧವ ಪೂಜಾರಿ, ಯತೀಶ್ ಹೊಸಗದ್ದೆ, ದಿವ್ಯಾ ನವೀನ್ ಸುವರ್ಣ, ನಿಶಾ ವಿನೋದ್ ಕುಮಾರ್ ಉಪಸ್ಥಿತರಿದ್ದರು.