ಮಂಗಳೂರು, ಡಿ.12 : ಮಂಗಳೂರಿನ ಇಂಡಿಯಾನಾ ಕನ್ವೆನ್ಶನ್ ಸೆಂಟರ್ ನಲ್ಲಿ ಚಾರ್ಟಡ್ ಅಕೌಂಟೆಂಟ್ ಗಳ ರಾಷ್ಟ್ರೀಯ ಸಮ್ಮೇಳನ ‘ದಕ್ಷ್’ ಡಿ.12 ಗುರುವಾರ ನಡೆಯಿತು.ಸಮ್ಮೇಳನವನ್ನು ಐಸಿಎಐನ ಗೌರವಾನ್ವಿತ ಮಾಜಿ ಅಧ್ಯಕ್ಷ ಸಿಎ ಅನಿಕೇತ್ ಸುನಿಲ್ ತಲಾಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಸಿಎ ಅನಿಕೇತ್ ಸುನಿಲ್ ತಲಾಟಿ ಮತ್ತು ಕರ್ನಾಟಕ ಸರ್ಕಾರದ ಗೌರವಾನ್ವಿತ ಮಾಜಿ ಕ್ಯಾಬಿನೆಟ್ ಸಚಿವರಾದ ಶ್ರೀ ಪುಮೋದ್ ಮಧ್ವರಾಜ್ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಿದರು.
‘ದಕ್ಷ್’ ರಾಷ್ಟ್ರೀಯ ಸಮ್ಮೇಳನದಲ್ಲಿ ಅಕೌಂಟಿಂಗ್ ನಲ್ಲಿ ತಂತ್ರಜ್ಞಾನ ಮತ್ತು ಆಟೋಮೇಷನ್ ಆದಾಯ ತೆರಿಗೆ ಮತ್ತು ಜಿಎಸಿ ಬೆಳವಣಿಗೆಗಳು,ಸೈಬರ್ ಭದ್ರತೆ, ಫೋರನ್ನಿಕ್ ಅಕೌಂಟಿಂಗ್ & ಇನ್ನೆಸ್ಟಿಗೇಟಿವ್ ಸರ್ವೀಸಸ್ ಹಣಕಾಸು ವರದಿ ಮತ್ತು ಪರಿಶೀಲನಾ ಮಾನದಂಡಗಳು ಈ ವಿಷಯಗಳ ಬಗ್ಗೆ ಅತ್ಯುತ್ತಮ ಡೊಮೇನ್ ತಜ್ಞರು ಮತ್ತು ತಜ್ಞರಿಂದ ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಸಿಎ ಅಧ್ಯಕ್ಷ ಗೌತಮ್ ಪೈ ಡಿ., ಉಪಾಧ್ಯಕ್ಷರು ಸಿಎ ಪ್ರಶಾಂತ್ ಪೈ, ಕಾರ್ಯದರ್ಶಿ ಸಿಎ ಡೇನಿಯಲ್ ಪಿರೇರಾ, ನಿಕಟಪೂರ್ವ ಅಧ್ಯಕ್ಷ, ಸಿಎ ಗೌತಮ್ ನಾಯಕ್, ಅಡ್ವಕೇಟ್ ಭರತ್ ರೈಚಂದಾನಿ (ಸಿಎ), ಹಿರಿಯ ಅಡ್ವಕೇಟ್ ಕೆ.ಕೆ.ಚೈತನ್ಯ (ಸಿಎ), ಸಿಎ ದುರ್ಗೇಶ್ ಪಾಂಡೆ,ಸಿ.ಎ.ಕೆ.ಗುರುರಾಜ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಿಎ ಬಿ.ಚಂದ್ರಕಾಂತ್ ರಾವ್ ಮತ್ತು ಸಿಎ ಪಸನ್ನ ಶೆಣೈ ಅವರಿಂದ ನಿರೂಪಣೆ, ಸಿಎ ಕಾರ್ತಿಕೇಯ ಶೆಣೈ, ಸಿಎ ನಂದನ್ ರಾವ್ ಮತ್ತು ಸಿಎ ವಿಷ್ಣು ಆಚಾರ್ಯ ಅವರಿಂದ ಫ್ಯಾನೆಲ್ ಡಿಸ್ಕಶನ್ ಕಾರ್ಯಕ್ರಮ ನಡೆಯಿತು.