ಬೋಳೂರು, ಡಿ. 22 : ಉರ್ವ ಬೋಳೂರಿನ ಶ್ರೀ ರಾಮ ಭಜನ ಮಂದಿರದಲ್ಲಿ 28ನೇ ವರ್ಷದ ಏಕಾಹ ಭಜನೋತ್ಸವ ಕಾರ್ಯಕ್ರಮ ಡಿ. 13ರಂದು ಪ್ರಾರಂಭಗೊಂಡು 21ರತನಕ ನಡೆಯಿತು.
ಡಿ. 20ರಂದು ಚಂಡಿಕಾಯಾಗವು ಬೆಳಗ್ಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಡಿ. 13ರಂದು ಶ್ರೀ ರಾಮ ಭಜನ ಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಡಿ. 14ರಂದು ಏಕಾಹ ಭಜನೆ ಪ್ರಾರಂಭಗೊಂಡು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಡಿ. 15ರಂದು ಸಂಜೆ 6ರಿಂದ ನೃತ್ಯ ಬಲಿ ಸೇವೆ, ಕಟ್ಟೆ ಪೂಜೆ, ಡಿ. 16ರಂದು ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ, ಅವಭ್ರಥೋತ್ಸವ, ಡಿ. 20ರಂದು ಚಂಡಿಕಾಯಾಗ, ಡಿ. 21ರಂದು ಸಂಜೆ ಉರ್ವ ಮಾರುಕಟ್ಟೆ ಮೈದಾನದಲ್ಲಿ ಶ್ರೀ ದೇವಿ ಮಹಾತ್ಮ ಯಕ್ಷಗಾನ ನಡೆಯಿತು.