Author: admin

ಬೆಳ್ತಂಗಡಿ, ಮೇ. 06: ಸವಣಾಲು ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕರೊಬ್ಬರು ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಿಗಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4ರಂದು ನಡೆದಿದೆ. ಶಿರಸಿ ಮೂಲದ ವಿಜಯ್ ಹೆಗಡೆ (33) ಅವರು ಆತ್ಮಹತ್ಯೆಗೆ ಶರಣಾದ ಅರ್ಚಕರು. ವಿಜಯ್ ಹೆಗಡೆ ಅವರು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಮುಂಜಾನೆ ಭಕ್ತರು ಆಗಮಿಸುವ ವೇಳೆ ವಿಜಯ್ ಬರದಿರುವುದನ್ನು ಕಂಡ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಅವರು ತಂಗುತ್ತಿದ್ದ ವಸತಿಗೃಹಕ್ಕೆ ವಿಚಾರಿಸಲು ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಕಾಸರಗೋಡು,  ಮೇ.1 : ಕಣ್ಣೂರು ಕಣ್ಣಾ ಪುರ ದಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ  ಅಪಘಾತದಲ್ಲಿ ಐವರು ಕಾಸರಗೋಡು ನಿವಾಸಿಗಳು ಸಾವನ್ನಪ್ಪಿದ  ಘಟನೆ ಸೋಮವಾರ ರಾತ್ರಿ ನಡೆದಿದೆ. ಕಣ್ಣೂರು ಕಡೆಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕಾರು ಮತ್ತು ಕಣ್ಣೂರು ಕಡೆಗೆ ತೆರಳು ತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಸಾಗಾಟ ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಲ್ಲಿದ್ದ ಮೂವರು ಪುರುಷರು, ಓರ್ವ ಮಹಿಳೆ ಹಾಗೂ 10 ವರ್ಷದ ಬಾಲಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾರ ಲ್ಲಿದ್ದವರು ಚಿತ್ತಾರಿಕಾಲ್ ಬೀಮನಡಿ ನಿವಾಸಿಗಳು ಎಂದು ಹೇಳಲಾಗಿದೆ.

Read More

ಮಂಗಳೂರು,ಏ.30. ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ ಗಬ್ಬರ್ ಸಿಂಗ್’ ಸಿನಿಮಾ ತೆರೆ ಕಾಣಲಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.. ಸಿನಿಮಾದಲ್ಲಿ ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ…

Read More

ಮಂಗಳೂರು,ಏ.30 : ವಾಮಂಜೂರಿನ ಹತ್ತಿರವಿರುವ ಗ್ಲೊಬಲ್ ಬ್ಯಾಡ್ ಮಿಂಟನ್ ಅರೆನ ಎಂಬಲ್ಲಿರುವ ಮೆಂಡೊನ್ಸಾ ಗಾರ್ಡನ್ ನಲ್ಲಿ ಲಿಟ್ಲ್ ವಿಂಗ್ಸ್ ಎಂಬ ಎಲ್ ಕೆ ಜಿ. ಯು.ಕೆ.ಜ಼ಿ. ನರ್ಸರಿ ಶುಭಾರಂಭಗೊಂಡಿತು. ಸಂತ ಜೊಸೆಫ್ ದಿ ವರ್ಕರ್ ಚರ್ಚ್ ವಾಮಂಜೂರು ಇಲ್ಲಿನ ಧರ್ಮ ಗುರುಗಳು ರೆ.ಫಾ. ಜೇಮ್ಸ್ ಡಿ.ಸೋಜ, ಮೂಡಬಿದರೆ ಶಾಸಕರಾದ ಉಮಾನಾಥ ಕೊಟ್ಯಾನ್ ಮತ್ತು ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಮಾಜಿ ಮ.ನ.ಪಾ. ಸದಸ್ಯರು ಜಯಪ್ರಕಾಶ್ ವಾಮಂಜೂರು, ಸಂತ ಜೊಸೆಫ್ ದಿ ವರ್ಕರ್ ಚರ್ಚ್ ವಾಮಂಜೂರು ಇಲ್ಲಿನ ಧರ್ಮ ಗುರುಗಳು ರೆ.ಫಾ. ಜೇಮ್ಸ್ ಡಿ.ಸೋಜ,ಮಂಗಳೂರು ಮ.ನ.ಪಾ. ಸದಸ್ಯರು ಹೇಮಲತ ರಘು ಸಾಲಿಯಾನ್, ನರ್ಸರಿಯ ಮಾಲಕಿ ನಿಖಿತ, ಮಾಲಕ ಕಿಶಾನ್ ಕುಮಾರ್ ಉಪಸ್ಟಿತರಿದ್ದರು.

Read More

ಮಾಣಿ, ಏ 29 : ಕೆಎಸ್ಸಾರ್ಟಿಸಿ ಬಸ್  ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಹಿಂದಿರುಗುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಸಾವನ್ನಪ್ಪಿದ ಘಟನೆ ಶನಿವಾರ ತಡರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಕ್ರಂಪಾಡಿ ಬಳಿ ನಡೆದಿದೆ. ಮೃತ ರನ್ನು ಜೈಸನ್ (30)ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ಆಟೋ ರಿಕ್ಷಾ ನಡುವೆ ನಸುಕಿನ ಜಾವ ಢಿಕ್ಕಿ ಸಂಭವಿಸಿ, ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆಗಾಗಲೇ ಜೈಸನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Read More

ಮೂಡುಬಿದಿರೆ, ಏ.28 : ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಎರಡನೇ ಶಾಖೆಯು ಮೂಡುಬಿದಿರೆಯ ಜೈನಪೇಟೆ ಬಡಗು ಬಸದಿ ಎದುರಿನ ಫಾರ್ಚೂನ್ ಹೈವೇ-2 ಕಟ್ಟಡದ ಮೊದಲ ಮಹಡಿಯಲ್ಲಿ ಏ. 27, ಆದಿತ್ಯವಾರ ಉದ್ಘಾಟನೆಗೊಂಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆಯ ಕಚೇರಿಯನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು. ನಂತರ ವಲೇರಿಯನ್ ಮೊರಾಸ್ ಅವರಿಗೆ ಮೊದಲ ಪಾಲು ಬಂಡವಾಳ ಪ್ರಮಾಣಪತ್ರ ವಿತರಿಸಿದರು. ಆಶೀರ್ವಚನವಿತ್ತ ಅಲಂಗಾರು ಹೋಲಿ ರೋಸರಿ ಚರ್ಚ್ನ ಧರ್ಮಗುರು ವಂ ವಾಲ್ಟರ್ ಡಿ’ಸೋಜಾ ಅವರು ದೇವರ ಅನುಗ್ರಹದಿಂದ ಆಡಳಿತದ ಪ್ರಾಮಾಣಿಕತೆ, ಆಸಕ್ತಿ, ಸಿಬಂದಿಗಳ ಸೌಜನ್ಯಪೂರ್ಣ ಸೇವೆಯಿಂದ ಸಹಕಾರ ಸಂಘವು ಪ್ರಗತಿ ಹೊಂದಲು ಸಾಧ್ಯವಾಗುವುದು ಎಂದು ಹೇಳಿದರು. ಬಳಿಕ ಲೂಯಿಸ್ ಡಿ’ಸಿಲ್ವ ಅವರಿಗೆ ಮೊದಲ ನಿರಖು ಠೇವಣಾತಿ ಪತ್ರ ವಿತರಿಸಿದರು. ಫರ್ಚೂನ್ ಪ್ರಮೋಟರ್ಸ್ ಪಾಲುದಾರರಾದ ಅಬುಲಾಲ್ ಪುತ್ತಿಗೆ ಅವರು ಭದ್ರತಾ ಕೋಶ ಉದ್ಘಾಟಿಸಿ ಮೆಟಲ್ಲಾ ಅಲ್ಲೋನ್ಸ್ ಅವರಿಗೆ ಉಳಿತಾಯ…

Read More

ಮಂಗಳೂರು,ಏ.28 : ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಸತೀಶ್ ಬಾರ್ಕೂರು ನಿರ್ಮಾಣದ ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಗಬ್ಬರ್ ಸಿಂಗ್ ತುಳು ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಈ ಚಿತ್ರವನ್ನುಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಗಬ್ಬರ್ ಸಿಂಗ್ ಸಿನಿಮಾ ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ. “ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಈ ಸಿನಿಮಾದ ಕಥೆ, ಚಿತ್ರಕಥೆ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್ , ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್…

Read More

ಮಂಗಳೂರು, ಏ.26: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದಲ್ಲಿ ಇದು ಮೊದಲ ಹಂತದ ಮತದಾನವಾಗಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಇಂದು ಬೆಳಿಗ್ಗೆ ಮತದಾನ ಮಾಡಿದರು. ಕಪಿತಾನಿಯೊ 179 ನೇ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ತಮ್ಮ ಹಕ್ಕು ಚಲಾಯಿಸಿದರು. ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಮ್ಮ ಸ್ವಗೃಹದ ಸಮೀಪದ ಕೊರ್ಗಿ ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಂದು ಬೆಳಿಗ್ಗೆ ಮತಗಟ್ಟೆ ಸಂಖ್ಯೆ 97ರಲ್ಲಿ ಮತದಾನ ಮಾಡಿದರು.

Read More

ಕುಂದಾಪುರ , ಏ 25 : ಬಡಗುತಿಟ್ಟಿನ ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಸುಬ್ರಹ್ಮಣ್ಯ ಧಾರೇಶ್ವರ  ಅವರು  ಪೆರ್ಡೂರು ಮೇಳದಲ್ಲಿ 28 ವರ್ಷಗಳಲ್ಲಿ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿ ದ್ದರು, ಅದಕ್ಕೂ ಮುನ್ನ ಕೋಟ ಅಮೃತೇಶ್ವರಿ ಮೇಳದಲ್ಲಿ ಕೂಡಾ ಸೇವೆ ಸಲ್ಲಿಸಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು.

Read More

ಬಂಟ್ವಾಳ, ಏ. 23 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ವಿವಿಧೆಡೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತಯಾಚನೆ ಮಾಡಿದರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಪ್ರಮುಖರು ಅಲ್ಲಿಪಾದೆ, ನಾವೂರು, ಅಮ್ಟಾಡಿ, ಮೂಲರಪಟ್ಣ, ಕರ್ಪೆ ಶ್ರೀ ರಾಮಾಂಜನೇಯ ಭಜನಾ ಮಂದಿರ, ಸಿದ್ಧಕಟ್ಟೆ, ರಾಯಿ, ಪಂಜಿಕಲ್ಲು, ಕುಕ್ಕಿಪ್ಪಾಡಿ, , ವಗ್ಗ ಮೊದಲಾದ ಪ್ರದೇಶಗಳ ಮತದಾರ, ಕಾರ್ಯಕರ್ತರ ಬಳಿಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುಧೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪ್ರಚಾರ ಸಮಿತಿಯ ಪಿಯೂಷ್ ರೋಡ್ರಿಗಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲವೀನಾ ಮೋರಸ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಉಸ್ತುವಾರಿ ಶಶಿಧರ್ ಪ್ರಭು, ಉಪಾಧ್ಯಕ್ಷ ರಮೇಶ್, ದಯಾನಂದ ಗೌಡ, ಪ್ರಕಾಶ್ ಜೈನ್, ವಿಕ್ಟರ್, ದಿನೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಕೃಷ್ಣಪ್ಪ…

Read More