Author: admin

ಉರ್ವ, ಏ.22 : ಉರ್ವ ಬೋಳೂರು ಶ್ರೀ ಕೊರಗಜ್ಜನ ಕ್ಷೇತ್ರ ದಲ್ಲಿ 18ನೇ ವಾರ್ಷಿಕ ನೇಮೋತ್ಸವವು ತಾ. 20-04-2024de ಶನಿವಾರದಿಂದ 21-04-2024 ರವಿವಾರದ ತನಕ ವಿಜ್ರಂಭಣೆಯಿಂದ ಜರಗಿತು. ಈ ಪ್ರಯುಕ್ತ ತಾ. 21-04-2024 ಆದಿತ್ಯವಾರ ರಾತ್ರಿ 7.00 ಗಂಟೆಗೆ  ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ದೊಂದಿ ಬೆಳಕಿನ (ತುಡರ ಕೋಲ) ಸೇವೆ ನಂತರ ಅಗೇಲು ಸೇವೆ, ಗಂಧ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.

Read More

ಉಡುಪಿ ಏ.21 : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಗುರುವಾರ ವಿವಿಧೆಡೆ ಭೇಟಿ ನೀಡಿ ಮತಯಾಚಿಸಿದರು. ಕಾಪು ಕ್ಷೇತ್ರದ ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ, ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಅಲ್ಲದೇ ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯ, ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಾಲಯ, ಕಟಪಾಡಿಯ ಕೋಟೆ ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕಾಪು ಕ್ಷೇತ್ರದ ಕುಕ್ಕೆಹಳ್ಳಿಯ ಓಜೋನ್ ಕ್ಯಾಷ್ಯು ಇಂಡಸ್ಟ್ರಿಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮತಯಾಚನೆ ಮಾಡಿದರು. ಪೆರ್ಡೂರು ಸಮೀಪದ ಬುಕ್ಕೆ ಗುಡ್ಡೆಯಲ್ಲಿರುವ ಸಿಂಧೂ ಕ್ಯಾಷ್ಯ ಇಂಡಸ್ಟ್ರೀಸ್ ನಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ…

Read More

ಬೆಳ್ತಂಗಡಿ, ಏ. 21: ಬೆಳ್ತಂಗಡಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 14 ವರ್ಷ ಕರ್ತವ್ಯ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದ ಡಾ. ಆದಂ ಉಸ್ಮಾನ್ (65) ಅವರು ಅಲ್ಪಕಾಲದ ಅಸೌಖ್ಯದಿಂದ ಎ.20 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ತಲಪಾಡಿ ಕೆ.ಸಿ ರೋಡ್ ನಿವಾಸಿ ಡಾ. ಆದಂ ಉಸ್ಮಾನ್ ಅವರು ಪುತ್ತೂರು, ಕಡಬ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದರು.

Read More

ಕೊಣಾಜೆ, ಏ. 21 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವರ, ಏ.14 ರಂದು ಬಿರುಸಿನ ಪ್ರಚಾರ ನಡೆಸಿದರು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತೊಕ್ಕೊಟ್ಟು, ಕುತ್ತಾರು ಭಾಗ ಸೇರಿದಂತೆ ಅಂಬ್ಲಮೊಗರು, ಗ್ರಾಮಚಾವಡಿ, ಅಸೈಗೋಳಿ, ಕೊಣಾಜೆ, ಮುಡಿಪು, ನರಿಂಗಾನ, ಚೇಳೂರು, ಕಂಬಳಪದವು, ಬೋಳಿಯಾರ್, ಮಂಜನಾಡಿ ಮೊದಲಾದೆಡೆ ಮತಯಾಚನೆ ನಡೆಸಿದರು.

Read More

ಮೂಡುಬಿದ್ರೆ, ಏ.20 : ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮೂಲ್ಕಿ- ಮೂಡುಬಿದ್ರೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದರು. ಅಭ್ಯರ್ಥಿಯಾದ ಚೌಟ ಅವರು ಏ.17ರಂದು ಮೂಲ್ಕಿ- ಮೂಡುಬಿದ್ರೆಯಲ್ಲಿ ಸಂಚಾರ ನಡೆಸಿದ್ದು, ಹಳೆಯಂಗಡಿ, ಕಿನ್ನಿಗೋಳಿ ಪೇಟೆ ಮತ್ತು ಮೂಡುಬಿದ್ರೆ ಪೇಟೆಯಲ್ಲಿ ಉದ್ದಕ್ಕೂ ಸಂಚರಿಸಿ ಅಂಗಡಿ, ಬೀದಿಗಳಲ್ಲಿ ಜನರ ಬಳಿ ಮತಯಾಚನೆ ಮಾಡಿದರು. ಮೂಡುಬಿದ್ರೆ ಕಿನ್ನಿಗೋಳಿಯಲ್ಲಿ ಸ್ಥಳೀಯ ಮುಖಂಡ ಈಶ್ವರ್ ಕಟೀಲ್ ನೇತೃತ್ವದಲ್ಲಿ ಯುವಕರು, ಮಹಿಳೆಯರು, ಸ್ಥಳೀಯ ಕಾರ್ಯಕರ್ತರು ಸಾಥ್ ನೀಡಿದರು.

Read More

ಸುಳ್ಯ ಏ. ಏ.20 : ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರವರು ಎ. 17ರಂದು ಸುಳ್ಯದ ಕೆವಿಜಿ ಕ್ಯಾಂಪಸ್‌ಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಹಾಗೂ ಶ್ರೀಮತಿ ಶೋಭಾ ಚಿದಾನಂದರವರು ಬ್ರಿಜೇಶ್ ಚೌಟರನ್ನು ಸ್ವಾಗತಿಸಿ, ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ ಮತಯಾಚನೆ ನಡೆಸಿದರು.

Read More

ಬಂಟ್ವಾಳ, ಏ. 19 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರು ಬಿರುಸಿನ ಪ್ರಚಾರ ಕಾರ್ಯ ನಡೆಸಿದರು. ಏ. 18 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಂಗಡಿ – ಮಳಿಗೆ, ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅಭ್ಯರ್ಥಿ ತಮ್ಮ ಊರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಹೂ ಮಾಲೆ ಹಾಕಿ, ಶಾಲು ಹೊದಿಸಿ, ಬರಮಾಡಿಕೊಂಡರು. ಅಭ್ಯರ್ಥಿಗೆ ಪದ್ಮರಾಜ್ ಆರ್. ಪೂಜಾರಿ ಅವರು ಮತ ಯಾಚನೆ ಮಾಡುವಾಗ ಅವರ ಜೊತೆ ತೆರಳಿ, ಅಭ್ಯರ್ಥಿ ಗೆ ಸಾಥ್ ನೀಡಿದರು. ಬಡಗ ಬೆಳ್ಳೂರು, ಅಮ್ಮುಂಜೆ – ಬಡಕಬೈಲು ಜಂಕ್ಷನ್, ಕಳ್ಳಿಗೆ – ಬ್ರಹ್ಮರಕೊಟ್ಲು, ಶೇಡಿಗುರಿ, ಬಾಳ್ತಿಲ, ಸೂರಿಕುಮೇರು, ಮಾಣಿ, ಬುಡೋಳಿ, ಕಲ್ಲಡ್ಕ, ಅಮ್ಟೂರು, ಬೊಳ್ಳಾಯಿ, ಮಿತನಡ್ಕ, ಕನ್ಯಾನ, ಕೊಡುಂಗಾಯಿ, ಸಾಲೆತ್ತೂರು, ಬೋಳಂತೂರು, ಸಜೀಪ ಮುನ್ನೂರು – ನಂದಾವರ ಜಂಕ್ಷನ್  ವಿವಿಧೆಡೆಗಳಿಗೆ ಇನ್ನಿತರ ಕಡೆಗಳಿಗೆ ತೆರಳಿ  ಕಾರ್ಯ ಮತ ಯಾಚನೆ  ಮಾಡಿದರು.

Read More

ಪುತ್ತೂರು, ಏ. 18: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ವರ್ಷಾವಧಿ  ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ, ಬ್ರಹ್ಮಶ್ರೀ ವಾಸುದೇವ ತಂತ್ರಿ, ಶ್ರೀಧರ ತಂತ್ರಿ, ಗುರುಪುಸಾದ್ ಅವರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮಗಳು ನಡೆದವು. ಬ್ರಹ್ಮರಥೋತ್ಸವದಲ್ಲಿ ದೇವಳದ ಆಡಳಿತಾಧಿಕಾರಿ ಹನುಮರೆಡ್ಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಶಾಸಕ ಅಶೋಕ್ ಕುಮಾರ್ ರೈ ಅವರ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು. ರಥೋತ್ಸವದ ಮೊದಲು ಪುತ್ತೂರು ಬೆಡಿ ಎಂದೇ ಪ್ರಸಿದ್ದಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಭಕ್ತಾದಿಗಳು ಬ್ರಹ್ಮರಥೋತ್ಸವ ದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮರಥೋತ್ಸವದ ಭಕ್ತಿ ಸಂಭ್ರಮದ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್…

Read More

ಮಂಗಳೂರು,ಏ.17 : ಪ್ರಧಾನಿ ನರೇಂದ್ರ ಮೋದಿಯವರುಮೋದಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗುರುಗಳಿಗೆ ದೊಡ್ಡ ಗೌರವ ಸಲ್ಲಿಸಿದ್ದಾರೆ. ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಒಳ್ಳೆಯ ನಿರ್ಧಾರ ಕೈಗೊಂಡ ಪ್ರಧಾನಿ ಅವರಿಗೆ ಅಭಿನಂದನೆಗಳು ಎಂದು ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದ. ಕ. ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರು ಹೇಳಿದರು. ನಾರಾಯಣಗುರುಗಳ ಪ್ರತಿಮೆಗೆ ಪ್ರಧಾನಿ ಮಾಲಾರ್ಪಣೆ ಮಾಡಿದ್ದು ಚುನಾವಣಾ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿಕೆಗೆ ಪ್ರತಿಕ್ರಯಿಸಿದ  ಸತೀಶ್ ಕುಂಪಲ ಅವರು, ಪ್ರಧಾನಿಯವರ ಕಾರ್ಯಕ್ರಮಕ್ಕೂ ಮುನ್ನವೇ ಕಾಂಗ್ರೆಸ್ನವರು ಮುಖ್ಯಮಂತ್ರಿಯವರನ್ನು ಕರೆಸಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸಬಹುದಿತ್ತು. ಮಾಲಾರ್ಪಣೆ ಮಾಡಿದ್ದನ್ನು ಪ್ರಶ್ನೆ ಮಾಡಬಾರದು. ಜಗತ್ತಿನ ಶ್ರೇಷ್ಠ ಮಾನವತಾವಾದಿಗೆ ಗೌರವ ಕೊಡುವ ವಿಚಾರದಲ್ಲಿ ಕಾಂಗ್ರೆಸ್‌ನವರು ಪ್ರಶ್ನಿಸಬಾರದು ಎಂದು ಸತೀಶ್ ಕುಂಪಲ  ಹೇಳಿದರು.

Read More

ಬೆಂಗಳೂರು, ಏ.16 :ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ಬೆಳಗ್ಗೆ ತಮ್ಮ ನಿವಾಸದಲ್ಲೇ ನಿಧನರಾಗಿದ್ದಾರೆ.  ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟ ದ್ವಾರಕೀಶ್  ಅವರು  ಕಳ್ಳ ಕುಳ್ಳ, ಗುರು ಶಿಷ್ಯರು, ಪಚಂಡ ಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರಿನಲ್ಲಿ ರಾಜಕುಳ್ಳ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಮಂಕುತಿಮ್ಮ ಪೊಲೀಸ್ ಪಾಪಣ್ಣ, ಆಪ್ತಮಿತ್ರ ಮುದ್ದಿನ ಮಾವ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಆಟಗಾರ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Read More