ಕೋಟ, ಜೂ. 03 : ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ ಕೋಟ ಅಮೃತೇಶ್ವರೀ ವೃತ್ತದ ಬಳಿ ಶನಿವಾರ ನಡೆದಿದೆ.
ಮೃತರನ್ನು ಕೋಟತಟ್ಟು ಕಲ್ಮಾಡಿ ನಿವಾಸಿ ವಾಸುದೇವ ಗಾಣಿಗ (33) ಎಂದು ಗುರುತಿಸಲಾಗಿದೆ.
ವಾಸುದೇವ ಅವರು ಶನಿವಾರ ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗಲು ಕುಂದಾಪುರದಿಂದ ಉಡುಪಿ ಕಡೆಗೆ ತೆರಳುವ ರಸ್ತೆಯಲ್ಲಿ ಬಂದು ಕೋಟ ಡಿವೈಡರ್‌ನಲ್ಲಿ ಬೈಕ್ ತಿರುಗಿಸುವ ವೇಳೆ ಮಂಗಳೂರಿನಿಂದ ಶಿರಸಿ ಕಡೆ ತೆರಳುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಕೋಟ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ವಾಸುದೇವ ಅವರು ಅದಾಗಲೇ ಸಾವನ್ನಪ್ಪಿದ್ದರು.